ರಾಮಶ್ಯಾಮ
ಒಂದು ಊರಿನಲ್ಲಿ ರಾಮ ಶಾಮ. ಎಂಬ ಇಬ್ಬರು ಗೆಳೆಯರು ಇದ್ದರು. ರಾಮ ಮೃದು ಸ್ವಭಾವದವ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ .ಶ್ಯಾಮ ತಾನಾಯಿತು ತನ್ನ ಓದಾಯಿತು ಎಂದು ಇರುವವ ಒಂದು ದಿನ ಅವರು ಶಾಲೆಗೆ ಹೋಗುವ ದಾರಿಯಲ್ಲಿ ಅಜ್ಜನೊಬ್ಬ ಮಾರ್ಗದಾಟಲು ತುಂಬಾ ಕಷ್ಟಪಡುವುದು ಕಂಡು ರಾಮ ಅವನಿಗೆ ಮಾರ್ಗ ದಾಟಲು ಮಾಡುತ್ತಾನೆ .ಇದರಿಂದ ಖುಷಿಪಟ್ಟು ಆ ಮುದುಕರು ರಾಮನನ್ನು ಹರಸುತ್ತಾರೆ ಶ್ಯಾಮ ಇದಾವುದನ್ನು ಗಮನಿಸದೆ ಶಾಲೆಗೆ ಹೊರಟು ಹೋಗುತ್ತಾನೆ.
ಆ ದಿನ ರಾಮ ಶಾಲೆಗೆ ಬರುವಾಗ ತಡವಾಗಿರುತ್ತದೆ ಟೀಚರ್ ಕೋಪದಿಂದ ರಾಮನನ್ನು ಬೈಯುತ್ತಾರೆ ರಾಮ ತಾನು ವೃದ್ಧಾರನ್ನು ಮಾರ್ಗದಾಟಿಸಿ ಬಂದ ಕಾರಣ ತಡವಾಯಿತೆಂದು ಹೇಳುತ್ತಾನೆ ಇದನ್ನು ತಿಳಿದ ಶಿಕ್ಷರಿಗೆ ರಾಮನ ಗುಣ ಕಂಡು ಖುಷಿಯಾಗುತ್ತದೆ ಎಲ್ಲರೂ ರಾಮನಂತೆ ಕೈಯಲ್ಲಾಗದವರಿಗೆ ಸಹಾಯ ಮಾಡಬೇಕು ಎಂದು ಶಿಕ್ಷಕಿ ವಿದ್ಯಾರ್ಥಿಗಳಿಗೆ ಹೇಳಿ ರಾಮನನ್ನು ಅಭಿನಂದಿಸುತ್ತಾರೆ
ಪಂಕಜಾ ಕೆ
Comments
Post a Comment