ಜಡೆ ಕವನ
ದತ್ತ ಪದ.....ಸೋರುತಿಹುದು ಮನೆಯ ಮಾಳಿಗೆ
ಪ್ರಕೃತಿ
ಸೋರುತಿಹುದು ಮನೆಯ ಮಾಳಿಗೆ
ಮಾಳಿಗೆಯಲಿ ಗೂಡು ಕಟ್ಟಿವೆ ಹಕ್ಕಿಗಳು
ಹಕ್ಕಿಗಳ ಮರಿಗಳು ಆಟವಾಡುತಿವೆ ನೀರಲಿ
ನೀರು ಸುರಿದು ಒದ್ದೆಯಾಯಿತು ವಸುಂಧರೆಯ ಒಡಲು
ವಸುಂಧರೆಯ ಒಡಲ ತುಂಬಾ ಚಿಗುರಿದೆ ಹಸಿರ ಸಿರಿ
ಹಸಿರ ಸಿರಿಯನು ಕಂಡು ಮೈ ಮನದಲಿ ಪುಳಕ
ಪುಳಕಗೊಂಡ ಮನ ನರ್ತಿಸುವ ನವಿಲು
ನರ್ತಿಸುವ ನವಿಲು ಕೊಡುತಿದೆ ಮನಕೆ ಆನಂದ
ಆನಂದದ ಅಮಲು ಮೈ ಮರೆಸುತಿದೆ
ಮೈಮರೆಸುವ ಪ್ರಕೃತಿ ಸೊಬಗ ಸವಿಯುತ ನಿಂತೆ
ನಿಂತು ಸುರಿಯುವ ಮಳೆಯ ನೋಡುತ ಬೆರಗಾದೆ
ಬೆರಗಾದ ನೋಟದಲಿ ಏನೋ ಅಮಲು
ಅಮಲಿನಲಿ ಎದ್ದು ನೋಡಲು ನೀರು ಸೋರುತಿಹುದು
ಪಂಕಜಾ ಕೆ ಮುಡಿಪು
Comments
Post a Comment