ಮಗು
ಇರಬೇಕು ಮನೆಯಲೊಂದು ಪುಟ್ಟ ಪಾಪ
ನಗುತ ಓಡಿಯಾಡುತ್ತಿದ್ದರೆ ಕಳೆಯುವುದುತಾಪ
ನಿಷ್ಕಲ್ಮಶ ನಗುವಿನ ಮೊಗದ ಅಂದ ಕೊಡುವುದು ಮನಕೆ ಆನಂದ
ಸವಿಜೊಲ್ಲ ಸುರಿಸಿ ನಗುವ ಬೊಚ್ಚುಬಾಯಿ
ಕನಸಲ್ಲೂ ನಗುತ್ತಿರುವ ಪುಟ್ಟ ಬಾಯಿ
ತೊದಲು ನುಡಿಗಳಲಿದೆ ಏನು ಸೊಗಸು
ಮನೆ ಮಂದಿಯರ ಕಟ್ಟಿ ಹಾಕುತ ಸುಸ್ತು
ಪುಟ್ಟ ಪಾಪುವಿನ ಅಳು ನಗು
ಕಳೆಯುವುದು ಎಲ್ಲರ ಮುಖದ ಬಿಗು
ಪಂಕಜಾ ಕೆ
Comments
Post a Comment