ಗಜಲ್
ಮನದಲ್ಲಿ ಚಿಂತೆ ಬೇಸರಗಳಿಗೆ ಎಡೆ ಕೊಡಬೇಡ ಸಖಿ
ನಿನ್ನೊಡನೆ ನಾನಿರುವೆ ಯೆನ್ನುವುದನ್ನು ಮರೆಯಬೇಡ ಸಖಿ
ಜೀವನವೆಂದರೆ ಕಷ್ಟಸುಖಗಳ ಸಂತೆಯಲ್ಲವೇ
ಬಂದದ್ದನ್ನು ಎದುರಿಸಲು ಹೆದರಬೇಡ ಸಖಿ
ಎಲ್ಲೆಡೆಯೂ ಹಬ್ಬಿದೆ ಮೋಹ ಮದ ಮತ್ಸ್ತರಗಳಜ್ವಾಲೆ
ಉರಿ ತಣಿಸಿ ಸಂತೋಷ ಹಂಚುವುದನ್ನು ಬಿಡಬೇಡ ಸಖಿ
ನಗು ನಗುತ ಇದ್ದರೆ ಕಷ್ಟಗಳು ದೂರಾಗುವುದಲ್ಲವೇ
ಪ್ರಯತ್ನಕ್ಕೆ ಫಲ ಸಿಗದಿದ್ದರೆ ಬೇಸರಿಸಬೇಡ ಸಖಿ
ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿರಬೇಕು ಪಂಕಜಾ
ನಿನ್ನನ್ನು ನಿರ್ಲಕ್ಷಿಸುವವರ ಜತೆ ಎಂದಿಗೂ ಸೇರಬೇಡ ಸಖಿ
Comments
Post a Comment