ಓ.ಇನಿಯಾ (ಭಾವಗೀತೆ)
ದತ್ತಪದ....ಸಂಗಮ
ನೋಡಲ್ಲಿ ಭೂಮಿಬಾನು ಒಂದಾಗಿದೆ
ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿದೆ
ತಂಪಾದಗಾಳಿಯು ಮುದ ತಂದಿದೆ
ನಿನ್ನೊಡನಾಟದಲ್ಲಿ ಮೈ ಮರೆತಿದೆ
ಮೋಡದ ಮರೆಯಿಂದ ಬರುತಿಹನು ಶಶಿ
ಬೆಳದಿಂಗಳ ಹಾಸಿಗೆಯದು ನಮಗಾಗಿದೆ
ನಿನ್ನೊಲವ ಸವಿಯುತ್ತಾ ಜಗ ಮರೆತಿದೆ
ರಸಿಕತನವು ಒಡಮೂಡಿ ತನು ಕುಣಿದಿದೆ
ಮಾಮರದಿ ಕೋಗಿಲೆಯು ಕುಕಿಲಿಡುತಿದೆ
ನವಿಲೊಂದು ನರ್ತನವ ತಾ ಗೈದಿದೆ
ಬಾ ನಲ್ಲ ಜತೆಯಾಗಿ ನಲಿಯೋಣವೇ
ಕನಸುಗಳ ಕಾಣುತ್ತ ಕುಣಿಯೋಣವೇ
ನದಿಯೊಂದು ಸಾಗರದಲಿ ಸಂಗಮಿಸಿದೆ
ಒಲವಿಂದು ತನು ಮನಕೆ ಮುದ ತಂದಿದೆ
ನಿನ್ನ ಜತೆಯಿರಲು ಬಾಳಿಂದು ಹೂವಾಗಿದೆ
ಸ್ವರ್ಗವೇ ಧರೆಗಿಳಿದಂತೆ ನನಗಾಗಿದೆ
ಓ ಇನಿಯಾ ನೀನಿರಲು ಬಾಳಲ್ಲಿ ನಗು ತುಂಬಿದೆ ಚೆಲುವಾದ ಹೂಗಳರಳಿ ಮನ ತುಂಬಿದೆ
ಬಾಳೆಲ್ಲಾ ಒಂದಾಗಿ ಬಾಳೋಣವೇ
ಒಟ್ಟಾಗಿ ದೇವರನು ಬೇಡೋಣವೇ
ಪಂಕಜಾ .ಕೆ.
Comments
Post a Comment