ಗಜಲ್
ನಿನ್ನ ಜತೆಯಲ್ಲಿದ್ದರೆ ಪ್ರಪಂಚವೇ ಮರೆಯುವುದು ಸಖ
ಕಣ್ಣೋಟದಲ್ಲಿ ತುಂಬಿದ ಅನುರಾಗಕ್ಕೆ ಮನಸೋಲುವುದು ಸಖ
ಬಾಳ ಬಂಡಿಯ ಎಳೆಯಲು ನೀನಿರಲೇಬೇಕಲ್ಲವೇ ಸಖಿ?
ನೀ ಕೊಡುವ ಪ್ರೀತಿ ವಿಶ್ವಾಸ ನನಗೆ ಉತ್ಸ್ಸಾಹ ತರುವುದು ಸಖ
ದಿನವೂ ಪ್ರಕೃತಿಯ ಜತೆಯಲ್ಲಿ ನಲಿಯೋಣವೇ ಗೆಳತಿ?
ನಗು ನಗುತ ಓಡಿಯಾಡಿದರೆ ಬಾಳು ಹೂವಿನ ಹಾಸಿಗೆ ಯಾಗುವುದು ಸಖ
ಅನ್ನ ಗಾಳಿ ನೀರು ಪ್ರಕೃತಿ ಕೊಟ್ಟಿರುವ ವರವಲ್ಲವೇ ಹೇಳು?
ಬೆಳೆಸಿ ಉಳಿಸುತ್ತ ಇದ್ದರೆ ಸಂತೋಷ ಕಾಣಬಹುದು ಸಖ
ನನ್ನ ಒಡನಾಟ ನಿನಗೂ ಖುಷಿ ತಂದಿದೆಯಲ್ಲವೇ ಪಂಕಜಾ?
ಹೊಗಳಿಕೆಯ ಮಾತುಗಳು ಹೊಸತನವನ್ನು ತುಂಬುವುದು ಸಖ
ಪಂಕಜಾ.ಕೆ.
Comments
Post a Comment