ವಿಷಯ..ಜಡೆಕವನ
ಶೀರ್ಷಿಕೆ ..ಮೋಡದ ಜತೆ ಹನಿಗಳ ಮುತ್ತು
ಬಾನಂಗಳದಲಿ ತುಂಬಿದೆ ಮೋಡಗಳ ಮುಸುಕು
ಮುಸುಕು ಸರಿಯಲು ಹರಿಯಿತು ಮುತ್ತಿನ ಹನಿ
ಹನಿಗಳ ಸ್ಪರ್ಶಕೆ ಭೂರಮೆಯು ಸಂತಸದಿ ನಲಿದು
ನಲಿದ ಕ್ಷಣಗಳಲಿ ಮನಕೆ ತುಂಬಿತು ಹುರುಪು
ಹುರುಪು ಉತ್ಸ್ಸಾಹದಲಿ ಬಾನಿನಲಿ ಮೋಡಗಳಾಟ
ಮೋಡಗಳಾಟದಲಿ ದಣಿದ ಹನಿಗಳ ಮುತ್ತು
ಮುತ್ತು ಪಡೆದ ಚೆಲುವೆಯ ನಾಚಿಕೆಯ ವೈಯಾರ
ವೈಯಾರದಿ ನಿಂತ ಸುಂದರಿಯ ಮೈಮಾಟ
ಮೈಮಾಟದಲಿ ಮೈಮರೆಯಿತು ಇನಿಯನ ಕಣ್ಣು
ಕಣ್ಣೋಟದಲಿ ನೂರು ಭಾವನೆಗಳ ಸೆಳೆತ
ಸೆಳೆತದಲಿ ಸಂಗಾತಿಯ ಜತೆ ಮುದದ ಪಯಣ
ಪಯಣದಲಿ ಒಬ್ಬರಿನ್ನೊಬ್ಬರು ಒಂದಾಗುವ ಭಾವ
ಬಾವನೆಗಳ ಭಾರದಲಿ ಕುಣಿಯಿತು ಮನಸು ನವಿಲು
ನವಿಲ ನರ್ತನದ ತೆರದಲಿ ಹೊಮ್ಮಿತು ಪ್ರೀತಿ
ಪ್ರೀತಿ ತುಂಬಿದ ಬಾಳು ಹರ್ಷದ ಕಡಲು
ಕಡಲ ತೆರೆಗಳ ತೆರದಿ ನಲಿಯುತ್ತಿದೆ ಪ್ರೇಮಿಗಳ ಮನ
ಪಂಕಜಾ.ಕೆ.
Comments
Post a Comment