ಪ್ರಕೃತಿಯ ಬಂಧ (ಭಾವಗೀತೆ)
ಆಹಾ ಎಂತಹ ಚೆಲುವಿನ ನೋಟ
ಪ್ರಕೃತಿಯ ಸಿರಿಯಲಿದೆ ಏನೋ ಮಾಟ
ಮೂಡಣ ಬಾನಲಿ ಮೂಡುವ ರವಿ
ಕಲಸಿದ ಚೆಲು ಬಣ್ಣಗಳ ಸವಿ
ಅರಳಿದ ಹೂಗಳ ಗಂಧದ ಕಂಪು
ಬೀಸುವ ಗಾಳಿಯು ತರುತಿದೆ ತಂಪು
ಹಾಡುವ ಕೋಗಿಲೆ ಗಾನದ ಇಂಪು
ಮೈಮನಕೆಲ್ಲಾ ತುಂಬಿತು ಹುರುಪು
ಹಳತನು ಕಳೆದು ಹೊಸತನು ತುಂಬಿ
ಚಿಗುರಿದೆ ಮಾಮರ ಎಲೆಗಳ ಉದುರಿಸಿ
ಕುಣಿಯುವ ನವಿಲಿನ ಅಂದವ ನೋಡಿ
ಮನಕದು ಮಾಡಿತು ಏನೋ ಮೋಡಿ
ಕೊಳದಲಿ ಆಡುವ ಮೀನುಗಳಾಟ
ಅರಳಿದ ನೈದಿಲೆ ಸೆಳೆದಿದೆ ನೋಟ
ಹಾರಾಡುವ ಹಕ್ಕಿಗಳ ದಂಡಿನ ಸೊಬಗು
ಕಾಣುವ ಕಣ್ಣಿಗೆ ತಂದಿತು ಬೆರಗು
ಪ್ರಕೃತಿಯ ಮಡಿಲಲಿ ನಲಿಯುತ ಮನವು
ಕಳೆಯಿತು ಮನಸಿನ ಎಲ್ಲಾ ನೋವು
ಪಂಕಜಾ.ಕೆ.
Comments
Post a Comment