ನನ್ನಾತ್ಮ ಬಂಧು
ನನ್ನೆದೆಯ ಬಾಂದಳದಿ ನೆಲೆಸಿರುವೆ ನೀನು
ಕನಸಲ್ಲೂ ಮನಸಲ್ಲು ತುಂಬಿರುವೆ ನೀನು
ಓ ನನ್ನ ಆತ್ಮಬಂಧುವೆ ಕರುಣೆಯಲಿ ನೋಡು
ಕೈ ಹಿಡಿದು ನೀ ನಡೆಸು ಈ ಬಾಳ ನೌಕೆ
ಎಲ್ಲೆಲ್ಲೂ ತುಂಬಿಹುದು ಸ್ಮಶಾನ ಮೌನ
ಮನದಾಳದಲ್ಲೆಲ್ಲಿಯೋ ಭೀತಿಯಾ ತಾಣ
ಕೈಮುಗಿದು ಬೇಡುವೆನು ಕರುಣೆಯಲಿ ಕಾಯು
ಕಷ್ಟಗಳ ಕಡಿದೊಗೆದು ಇಷ್ಟಗಳ ನೀಡು
ಅಣುರೇಣು ತೃಣ ಗಳಲಿ ನೀ ನಿರುವೆ ತಂದೆ
ಬಂದೊಮ್ಮೆ ಉದ್ಧರಿಸು ಜಗವನ್ನು ಇಂದೇ
ದಟ್ಟಕಾನನದಲ್ಲಿ ದಾರಿಕಾಣದೆ ನಿಂತಿರುವೆ
ದೀಪವನು ಬೆಳಗಿಸಿ ದಾರಿ ತೊರೆಮಗೆ ತಂದೆ
ಮಂಗಳ ಮೂರುತಿ ನಿನಗೆ ಶರಣೆಂಬೆ ನಾನು
ಪರಿಹರಿಸು ಕಷ್ಟಗಳ ಅನುದಿನವೂ ನೀನು
ಕಾಲಕಾಲಕ್ಕೆ ಅವತರಿಸಿ ಜಗವನುದ್ದರಿಸಿದೆ
ಬೇಗದಲಿ ಬಂದೀಗ ಉದ್ಧರಿಸು ನನ್ನಾತ್ಮ ಬಂಧು
ಭಕ್ತಿಯಲಿ ಬೇಡಲು ಕೊಡುವೆ ನೀನೆಲ್ಲವೂ
ಸಕಲರಿಗೆ ಒಳಿತನ್ನು ನೀ ಮಾಡೆಯಾ
ಪಂಕಜಾ. ಕೆ.
Comments
Post a Comment