ಗೃಹಿಣಿ (ನ್ಯಾನೊ ಕಥೆ)
ತನ್ನಮನಸ್ಸಿಗೆ ವಿರುದ್ಧವಾಗಿ ತಂದೆ ತಾಯಿಯರ ಒತ್ತಾಯಕ್ಕೆ ಸಂಜೀವಿಯನ್ನು ಮದುವೆಯಾದ ರಾಜೀವ ,ಒಮ್ಮೆಯೂ ಆಕೆಯೊಡನೆ ಸಂಸಾರ ಮಾಡಲಿಲ್ಲ .ಆದರೆ ಸಂಜೀವಿ ಅತ್ತೆ ಮಾವನಿಗೆ ಈ ವಿಷಯ ತಿಳಿಯದಂತೆ ಜಾಣ್ಮೆಯಿಂದ ಸಂಸಾರ ಮಾಡುತ್ತಾ ಗಂಡನ ಬೇಕು ಬೇಡಗಳನ್ನು ಮೌನವಾಗಿ ನೋಡಿಕೊಳ್ಳುತ್ತ ಗೃಹಿಣಿ ಯ ಕರ್ತವ್ಯ ನಿರ್ವಹಿಸುತ್ತಾ ಇದ್ದಳು . ಒಂದು ದಿನ ಆಕೆ ಯಾವುದೋ ಕಾರಣಕ್ಕೆ ತಾಯಿ ಮನೆಗೆ ಹೋದವಳು ಲಾಕ್ ಡೌನ್ ನಿಂದಾಗಿ ಅಲ್ಲಿಯೇ ಇರುವಂತಾಯಿತು. ಆಗ ರಾಜೀವನಿಗೆ ತನ್ನ ಹೆಂಡತಿ ತಾನು ಅವಳನ್ನು ನಿರ್ಲಕ್ಷಿಸಿದರೂ ತನ್ನ ಸಂಸಾರವನ್ನು ಎಷ್ಟು ಚೆನ್ನಾಗಿ ನೋಡಿ ಕೊಂಡಿದ್ದಳು ಎಂದು ತಿಳಿದು ಆಕೆಯ ಬಗ್ಗೆ ಅಭಿಮಾನ ಉಕ್ಕಿ ಬಂತು.
ಪಂಕಜಾ.ಕೆ
Comments
Post a Comment