ಸಂಜೆಯ ಸೊಬಗು (ಚಿತ್ರ ಕವನ ಸ್ಪರ್ಧೆಗಾಗಿ)
ಸಂಜೆಯ ಸೊಬಗದು
ಕಂಗಳ ಸೆಳೆಯುವುದು
ಚಿನ್ನದ ಬಣ್ಣವು ಹರಡಿಹುದು
ಬಾನಲಿ ಕಲಸಿದೆ
ಚೆಲುವಿನ ಬಣ್ಣ
ರಸಿಕರ ಮನವನು ತುಂಬುವುದು
ಪಡುಗಡಲಲಿ
ಮುಳುಗುವ ರವಿಯನು
ಶರಧಿಯು ತಾನೇ ಸೆಳೆದಿಹಳೇ
ಕಣ್ಮನ ತುಂಬುವ
ಸುಂದರ ನೋಟ
ಕವಿಮನದಲಿ ಭಾವನೆ ಸ್ಪುರಿಸುವುದು
ನೀಲಾಗಾಸದಿ
ತುಂಬಿದೆ ಬಣ್ಣ
ಭಾಸ್ಕರ ಬಣ್ಣವ ಬಳಿದಿಹನೆ?
ಏನಿದು ಬೆರಗಿನ
ಪ್ರಕೃತಿಯ ವೈಭವ
ಮೈಮನಕೆಲ್ಲಾ ಪುಳಕವ ತುಂಬುತಿದೆ
ಪಂಕಜಾ.ಕೆ. ಮುಡಿಪು
Comments
Post a Comment