ಸಹೋದ್ಯೋಗಿ ನ್ಯಾನೊ ಕಥೆ
ಆತ ಕೆಲಸಕ್ಕೆ ಸೇರಿದ ಹೊಸತು, ಕೆಲಸದ ಬಗ್ಗೆಯಾಗಲಿ ಹಣದ ವ್ಯವಹಾರದ ಬಗ್ಗೆಯಾಗಲಿ, ಏನೊಂದು ತಿಳಿಯದ ಮುಗ್ಧ .ಆದಿನ ಸಾಯಂಕಾಲ ಆತನಿಗೆ ಲೆಕ್ಕದಲ್ಲಿ ಸ್ವಲ್ಪ ವ್ಯತ್ಯಾಸ ಬಂತು .ಆತ ಏನು ಮಾಡುವುದೆಂದು ತಿಳಿಯದೆ ತನ್ನ ಸಹೋದ್ಯೋಗಿಯ ಮುಖ ನೋಡಿದ. ಆತ ತನಗೇನೂ ಸಂಬಂದ ವಿಲ್ಲದಂತೆ ಇರುವುದು ಕಂಡು ತಾನು ಇದನ್ನು ಹೇಳಿದರೆ ಹೇಗೋ ಎಂದು ಆ ದಿನ ತನ್ನ ಕೈಯಿಂದಲೇ ದುಡ್ಡು ಹಾಕಿ ಅಕೌಂಟ್ ಸರಿಪಡಿಸಿಕೊಟ್ಟ ಆದರೆ ಮರುದಿನವೂ ಇದೆ ಪುನರಾವೃತ್ತಿ ಆದದ್ದು ನೋಡಿ ಆತ ತನ್ನ ಸಹೋದ್ಯೋಗಿಯಲ್ಲಿ ಈ ವ್ಯವಹಾರ ನನಗೆ ಸ್ವಲ್ಪ ಹೇಳಿಕೊಡಿ ಎಂದದ್ದೇ ತಡ,ಆತ ಬಾಯಿಗೆ ಬಂದಂತೆ ಬೈದದ್ದು ಅಲ್ಲದೆ ಎಲ್ಲಾ ವನ್ನು ಅವನ ಹತ್ತಿರ ಬಿಸಾಡಿ ಎಲ್ಲಾ ನೀನೇ ನೋಡು ಎಂದು ಹೇಳಿದ್ದು ನೋಡಿ ಕಕ್ಕಾಬಿಕ್ಕಿಯಾದ ಆತ ತಾಳ್ಮೆ ಕಳೆದುಕೊಳ್ಳದೆ, ಆದಿನವೇ ತನ್ನ ಗೆಳೆಯನ ಬಗ್ಗೆ ಈ ವಿಷಯ ಚರ್ಚಿಸಿ ಮರುದಿನದಿಂದಲೇ ಹಣದ ಪೆಟ್ಟಿಗೆಗೆ ಬೀಗ ಹಾಕುವ ಪರಿಪಾಠ ಮಾಡಿದ ಮತ್ತೆಂದೂ ಆತನಿಗೆ ಲೆಕ್ಕ ತಪ್ಪಲಿಲ್ಲ
ಪಂಕಜಾ.ಕೆ
Comments
Post a Comment