ಬೇಡಿಕೆ
ಬಾನು ತುಂಬಿದ ಕರಿಯ ಮುಗಿಲೆ
ಸುರಿಸಲಾರೆಯ ಮಳೆಯನು
ಬಿರು ಬಿಸಿಲಿಗೆ ಹೊತ್ತಿ ಉರಿವ ಧರೆಗೆ
ಉಣಿಸಲಾರೆಯ ತಂಪುಕಂಪಿನ ಉಸಿರನು
ನೀರ ಸೆಲೆಯು ಅಳಿದು ಹೋಗಿದೆ
ಭೂಮಿ ಬಿರಿದು ಸಸ್ಯ ಸಂಕುಲ ಒಣಗಿದೆ
ಒಮ್ಮೆ ನೀನು ಬಂದು ತುಂಬಿಸು
ನೀರಸೆಲೆಯನು ಎಲ್ಲೆಡೆ
ಕಾಯುತಿರುವುದು ಭೂಮಿತಾಯಿ
ನಿನ್ನ ಪ್ರೀತಿಯ ಅಪ್ಪುಗೆಗೆ
ಎಂದು ನೀನು ಬಂದು ಸುರಿಸುವೆ
ಒಲವ ಧಾರೆಯ ಸುಧೆಯನು
ಬೇಡಿಕೊಳ್ಳುವೆ ನಿನ್ನ ನಾನು
ಸುರಿಸು ನೀರ ಧಾರೆಯ
ಒಣಗಿಹೋಗಿರುವ ತರು ಲತೆಗಳಿಗೆ
ತುಂಬು ಹಸಿರು ಉಸಿರನು
ಪಂಕಜಾ ಕೆ
Comments
Post a Comment