ಕಾಮದಹನ
ಕಾಮನನು ದಹಿಸುತ ಪ್ರೇಮವನು ಬಿತ್ತುತ
ಎಲ್ಲರೂ ಒಂದಾಗಿ ಮನೋಲ್ಲಾಸ ಪಡುತ
ರಂಗಿನಾಟವ ಆಡುತಲಿ ಹೋಲಿಯಾಟವ ಆಡೋಣ
ಮೇಲು ಕೀಳು ಎಂಬ ಭೇದಭಾವವವತೊರೆದು
ಸಂಭ್ರಮದ ಆಚರಣೆಯಲಿ ಮನಕೆ ಮುದತುಂಬಿ
ಕಾಮನ ಬಿಲ್ಲಿನ ಬಣ್ಣಗಳ ಬಾಳಲಿ ತುಂಬಿ
ಮೈ ಮರೆಯೋಣ ಹೋಲಿಯಾಟದ ಬಣ್ಣಗಳಲಿ
ಎಲ್ಲೆಡೆಯೂ ಚೆಲ್ಲಿದೆ ಬಣ್ಣಗಳ ಓಕುಳಿ
ಭಾವೈಕ್ಯತೆಯ ಸಂಕೇತ ಈ ರಂಗಿನಾಟ
ಮನೆ ಮನಗಳಲಿ ತುಂಬುತಿದೆ ಸಂತೋಷ
ಪ್ರಕೃತಿಯಲಿ ತುಂಬಿದೆ ನವೋಲ್ಲಾಸ ಹಾಸ
ಮಧುರಾನುಭವಗಳು ಮನಕೆ ತುಂಬಿ
ಕಪಟ ವಂಚನೆ ದುರುಳತನವೆಂಬ ಕಾಮನನು ದಹಿಸಿ
ಮನದ ವಿಕೃತಿಗಳ ಕಳೆದು ಅಂತರಂಗದ ಶುದ್ದಿಯಲಿ
ಪರಿಸರ ಸ್ನೇಹಿಯಾಗಿ ಆಚರಿಸೋಣ ಹಬ್ಬ
ಪಂಕಜಾ.ಕೆ.
Comments
Post a Comment