ಸ್ಪರ್ಧೆಗಾಗಿ
ದತ್ತಪದ...ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ
ಬಾಳ ಪಯಣ
ಬಾಳ ಪಯಣದ ತಿರುವಿನಲಿ ನೀನಂದು ಸಿಕ್ಕೆ
ಒಲವ ಸುರಿಸುತ ಬರಿದೆ ನನ್ನೆಡೆಗೆ ನಕ್ಕೆ
ಮೈಮನವು ಹೊಸತನದ ಅಲೆಯಲ್ಲಿ ತೇಲಾಡಿತು
ಮದುರಾನುಭೂತಿಯಲಿ ತನುಮನವು ಓಲಾಡಿತು
ನಸು ನಗುವ ಬೀರುತ್ತ ನೀ ನನ್ನ ನೋಡಿದಾಗ
ನಾಚಿಕೆಯ ತೆರೆಯೊಂದು ಅಲ್ಲಿ ಸರಿದಾಡಿತು
ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ
ಮನವಿಂದು ಏಕೋ ತಲ್ಲಣಿಸಿದೆ
ನಿನ್ನೊಲವಿನ ಕರೆಗೆ ಮನ ಸೋತಿದೆ
ಮೌನವಾಗಿ ಮಿಡಿದಿದೆ ನನ್ನ ಈ ಹೃದಯ
ಬಾಳಿನಾಗಸದಲ್ಲಿ ಬೆಳ್ಳಿ ಚಂದಿರನಂತೆ ನೀಬಂದೆ
ಮನದಂಗಳದಲಿ ಚೆಲು ಕನಸ ನೀ ಬಿತ್ತಿದೆ
ಮಿತವಾದ ಮಾತಿನಲಿ ಹಿತವಾದ ಒಲವಿನಲಿ
ಮನವನ್ನು ನಿನ್ನೆಡೆಗೆ ಸೆಳೆದೊಯ್ದೆಯಲ್ಲ
ಸಮರಸವ ಜೀವನವು ನೆಮ್ಮದಿಯ ತಂದಿರಲು
ಮನವಿಂದು ಸಂತಸದ ಗೂಡಾಯಿತು
ಪಂಕಜಾ.ಕೆ
Comments
Post a Comment