ರಾಧಾ ಮಾಧವ
ಮುರಳಿಗಾನದಿ ಮೈ ಮರೆತಳಾ ರಾಧೆ
ಒಲವ ಗಾನದಲಿ ಒಲಿಸುವನೆಂದು ಕಾದಳಾ ಮುಗುದೆ
ಮಾಧವನ ಸುಳಿವಿಲ್ಲದೆ ಬಸವಳಿದಿದೆ ತನು
ಚಂದ್ರಕಾಂತಿಯ ಇರುಳ ಕತ್ತಲಿನಲೂ ಕಂಪಿಸುತ್ತಿದೆ ತನು
ಪ್ರೇಮದಾರತಿಯನು ಹೊತ್ತಿಸಿ ಕಾದೆ
ಬಂದೇ ಬರುವೆಯೆಂದು ಮನ ತೆರೆದು ಕಾದೆ
ಮುರಳಿ ಲೋಲನಾಗಮನದಲಿ ಖುಷಿ
ರಾಧೆಯ ಮೊಗವರಳಿ ಹೊಮ್ಮುತ್ತಿದೆ ಕಾಂತಿ
ಬೃಂದಾವನದಲಿ ಹಕ್ಕಿಗಳ ಮಧುರ ಗಾನ
ವಸಂತನಾಗಮನಕೆ ಅರಳುವ ಹೂಬನ
ಮಾಧವನ ಒಲವಿನಾಸರೆಯ ಪಾನ
ರಾಧೆಯ ಮನದಲಿ ಮಾಧವನದೇ ಧ್ಯಾನ
ಬುವಿಯಲಿ ನವಿಲ ನರ್ತನದ ಚಂದ
ಒಲವಿನ ರಸದಲಿ ಬದುಕಿನಾಸರೆಯ ಬಂಧ
ರಾಧಾಮಾಧವರ ಪ್ರೀತಿಯ ಅನುಬಂಧ
ಮುರಳೀ ಲೋಲನ ಒಲವಿನಾಸರೆಯು ಚಂದ
ಪಂಕಜಾ.ಕೆ.
Comments
Post a Comment