Skip to main content

ಪ್ರತೀಕಾರ ಕಥೆ ವಾಹಿನಿ ಕಲಾಸಂಘ ಪುತ್ತೂರು ಬಳಗದಲ್ಲಿ ಬಹುಮಾನ ಪಡೆದ ಕಥೆ



 ಪ್ರತೀಕಾರ.  (ಕಥೆ)

ಅದೊಂದು ಸುಂದರ ಪ್ರಕೃತಿ ರಮ್ಯ ಸ್ಥಳ ಸುತ್ತಲೂ ಹಸಿರು ಗುಡ್ಡಗಳಿಂದ ತುಂಬಿ ನೋಡುಗರ ಕಣ್ಮನವನ್ನು ಸೆಳೆಯುತ್ತಿತ್ತು. ಆ. ಕಾನನದ ಬದಿಯಲ್ಲಿ ಜುಳು ಜುಳು ಎಂದು ವರ್ಷಪೂರ್ತಿ ಹರಿಯುವ ಒಂದು ನದಿ ತನ್ನೊಡಲಲ್ಲಿ ಅನೇಕ ಜಲಚರಗಳಿಗೆ ಆಶ್ರಯ ಕೊಟ್ಟು ತೃಪ್ತಿಯಿಂದ ಹರಿದಾಡುತ್ತಿತ್ತು ಆ ನದಿಯ ದಂಡೆಯಲ್ಲಿ ಕುಳಿತರೆ ಎಂತಹ ಚಿಂತೆ ತಲೆನೋವು ಇದ್ದರೂ ತಕ್ಷಣ ಪರಿಹಾರವಾಗಿ ಮನಸಿಗೆ ಶಾಂತಿ ಸಿಗುತ್ತಿತ್ತು.
             ಅದಕ್ಕೆ ಕಾರಣವೆಂದರೆ ಆ ಪ್ರದೇಶದಲ್ಲಿ ವಾಸಿಸುವ ನೂರಾರು ಹಕ್ಕಿಗಳ ಗಾನದ ಇಂಪು ,ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡಿಕೊಂಡಿರುವ  ಸಣ್ಣ ಸಣ್ಣ ಮೀನುಗಳನ್ನು ಹಿಡಿಯಲು ಹಾರಿ ಬರುವ ಬೆಳ್ಳಕ್ಕಿಗಳ ಗುಂಪು, ನದಿಯಲ್ಲಿ ತೇಲಾಡುತ್ತಿರುವ ಬೆಳ್ಳನೆಯ ಹತ್ತಿಯಂತೆ ಕಾಣುವ ಹಂಸಗಳು, ಸುತ್ತಲ ಕಾಡು ಗಿಡಗಳಿಂದ ಬೀಸಿಬರುವ ತಂಗಾಳಿಯಲ್ಲಿ ಪಸರಿಸುವ ವಿವಿಧ ಬಗೆಯ ಹೂಗಳ ಗಂಧ ,ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು ಇವುಗಳೆಲ್ಲಾವನ್ನು ನೋಡುವುದೇ ಒಂದು ಹಬ್ಬ.
            ವಸಂತ ಬೇಸಿಗೆಯ ರಜೆಯಲ್ಲಿ ತಪ್ಪದೆ ಅಲ್ಲಿಗೆ ಬಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತು ನದಿಯ ನೀರಿನಲ್ಲಿ ಮನಸೋ ಇಚ್ಚೆ ಈಜಾಡಿ ತನ್ನ ಪೇಟೆಯ ಜಂಜಾಟಗಳನ್ನು ಕಳೆದು ಹಿಂತಿರುಗುತ್ತಿದ್ದ .ಆ ಸುಂದರ ಸ್ಥಳಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಒಂದು ದಿನ ಬೆಳಗ್ಗಿನ ಜಾವವೇ ಅಲ್ಲಿಯ ಕಾಡುಗುಡ್ಡಗಳನ್ನು ನೆಲಸಮ ಮಾಡುವ ಬುಲ್ಡೋಜರ್ ಗಳ ಕರ್ಕಶ    ಸ್ವರ ಆ ಕಾನನದಲ್ಲಿ ವಾಸಿಸುತ್ತಿದ್ದ ಹಕ್ಕಿಗಳನ್ನು ಗಾಬರಿ ಪಡಿಸಿ ,ಅವುಗಳು ದಿಕ್ಕಾಪಾಲಾಗಿ ಚೀತ್ಕರಿಸುತ್ತ ಬಾನಿನಲ್ಲಿ ಹಾರಾಡುವಂತೆ ಮಾಡಿತು.ತಮ್ಮ ಮಕ್ಕಳು ಮರಿಗಳನ್ನು ಕಳೆದುಕೊಂಡ ಹಕ್ಕಿಗಳು ದಿಕ್ಕೆಟ್ಟು ಕೂಗುತ್ತಾ ಹಾರಾಡುವ ದೃಶ್ಯ  ಹೃದಯ ಕಲಕುವಂತಿತ್ತು ಆದರೆ ಆ ಕಟುಕರಿಗೆ ಅದಾವುದರ ಪರಿವೆ ಇಲ್ಲ ,ಅವರ ದೃಷ್ಟಿಯೆಲ್ಲ ಕಿಸೆಗೆ ಹಣ ತುಂಬುವುದರತ್ತ ಇತ್ತು
            ಕ್ರೂರಿ ಮನುಜನಿಗೆ ಆ ಪಕ್ಷಿಗಳ ಸಂಕಟವನ್ನು ಅರ್ಥಮಾಡಿಕೊಳ್ಳುವ ವ್ಯವದಾನವಿಲ್ಲ. ತನ್ನ ಕಿಸೆ ತುಂಬಾ ದುಡ್ಡು ಬಂದರೆ ಆಯಿತು ದುಡ್ಡೇ ದೊಡ್ಡಪ್ಪ ಅಂತ ತಿಳಿದ ಆತ ಆ ಸುಂದರ ಪರಿಸರವನ್ನು ಬಯಲಾಗಿಸಿ ಅಲ್ಲಿ ಗೇರುಬೀಜದ ಕೃಷಿಯನ್ನು ಮಾಡಿಬಿಟ್ಟ.  ಗೇರು ಬೀಜಗಳು ಹೂವು ಬಿಡುವಾಗ  ಹೆಲಿಕಾಪ್ಟರ್ ಮುಖಾಂತರ  ಎಂಡೋಸಲ್ಫಾನ್ ಎಂಬ ಮಾರಕ ವಿಷ ಸಿಂಪಡಿಸಿ  ರಾಶಿ ರಾಶಿ ಹಣವನ್ನು ಒಟ್ಟುಗೂಡಿಸಿ ಆರಾಮ ಇರುವ ಕನಸು ಕಾಣುತ್ತಾನೆ.
             ಇನ್ನೇನು ನಾನು ಸುಖವಾಗಿ ದಿನ ಕಳೆಯಬಹುದು ಕಿಸೆ ತುಂಬಾ ಗರಿ ಗರಿ ನೋಟುಗಳು ತುಂಬಿದ್ದರಿಂದ ಖುಷಿಯಲ್ಲಿ ಆತ ಮನಬಂದಂತೆ ಕುಣಿದಾಡುತ್ತಿದ್ದ. ಆದರೆ ವಿಧಿ ಅವನ ಪಾಪಕ್ಕೆ ತಕ್ಕ ಪ್ರಾಯಶ್ಚಿತ ಮಾಡಲು ಹೊಂಚು ಹಾಕುತ್ತಿತ್ತು ಅದರಂತೆ  ಒಂದು  ಬೆಳಗಿನ ಜಾವ ಆತ ಹಾಸಿಗೆಯಿಂದ  ಏಳಬೇಕು ಎಂದಿದ್ದಾಗ ಆತನ ಕಾಲು ಸ್ವಾದೀನವೇ ಇಲ್ಲದೆ ಆತ ಪರಾವಲಂಬಿಯಾಗಬೇಕಾಯಿತು. ದುಡ್ಡು ನೀರಿನಂತೆ ಖರ್ಚು ಮಾಡಿ ಎಷ್ಟೆಷ್ಟೋ ಔಷಧಿ ಗಳನ್ನು ಮಾಡಿದರೂ ಪ್ರಯೋಜನವಾಗದೆ  ಆತ ದಿನ ದಿನಕ್ಕೆ  ಕ್ಷೀಣಿಸುತ್ತಿದ್ದ. ಇಷ್ಟೇ ಆದರೆ ಸುಮ್ಮನಿರಬಹುದಿತ್ತೇನೋ ಆದರೆ ತಾನು ಪ್ರೀತಿಯಿಂದ ಬೆಳೆಸಿದ ಇನ್ನೂ ಬಾಳಿ ಬದುಕಬೇಕಾದ ತನ್ನ ಮಕ್ಕಳು ತನ್ನಂತೆ ಹಾಸಿಗೆ ಹಿಡಿದಾಗ ಆತನಿಗೆ ತಾನು ಮಾಡಿದ ಪ್ರಕೃತಿ ನಾಶದ ನೆನಪು ಕಾಡಿ ಕಣ್ಣಿನಿಂದ ನೀರು ಸುರಿಯಲು ಪ್ರಾರಂಭವಾಯಿತು .
            ಆತನ ಹೆಂಡತಿಯು ನಾವು ಮಾಡಿದ ಪಾಪದ ಫಲ  ನಮ್ಮನ್ನು ಮಾತ್ರವಲ್ಲದೆ ಇಡೀ ಊರಿಗೆ ಮಾರಿಯಾಗುತ್ತಿದೆ ಆಚೆ ಮನೆ ಸೇಸಣ್ಣ,ಮೂಲೆ ಮನೆ ಶಾಮಣ್ಣನ ಮನೆಯಲ್ಲೂ ಎಲ್ಲರೂ ಕೈ ಕಾಲು ಬಿದ್ದು ಮೂಲೆ ಸೇರಿದ್ದಾರಂತೆ ಎಂದು ಹೇಳಿದಾಗ ಆತ ಭೂಮಿಗಿಳಿದು ಹೋದ ತಾನು ಮಾಡಿದ ಆ ಒಂದು ಸಣ್ಣ ತಪ್ಪು ಈ ರೀತಿ ಊರನ್ನೇ ಬಲಿ ತೆಗೆದು ಕೊಳ್ಳುವುದು ಕಂಡು ಅಸಹಾಯಕತೆಯಿಂದ ಕಣ್ಣೀರು ಸುರಿಸುವುದು ಬಿಟ್ಟರೆ ಆತ ಬೇರೇನನ್ನೂ ಮಾಡದವನಾಗಿದ್ದ
                ಕೆಲಸಕ್ಕೆಂದು ಅಮೆರಿಕಾಕ್ಕೆ ತೆರಳಿದ್ದ ವಸಂತ ಊರಿಗೆ ಬಂದಾಗ ಅಂದು ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಇಂದು ಸ್ಮಶಾನವಾಗಿರುವುದು ಮತ್ತು ಪ್ರಶಾಂತವಾಗಿ ಹರಿಯುತ್ತಿದ್ದ ನದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ಮಲಿನವಾಗಿರುವುದು ಕಂಡು, ಮಾನವನ ದುರಾಶೆಗೆ ಪ್ರಕೃತಿ ಮಾಡಿದ ಪ್ರತೀಕಾರವಿದು ಎಂದು ತಿಳಿದು  ಇನ್ನಾದರೂ ಮನುಷ್ಯ ಪ್ರಕೃತಿ ನಾಶ ಮಾಡದೆ  ಅದನ್ನು ಉಳಿಸಿ ಬೆಳೆಸುವಂತಾಗಲಿ ಮುಂದಿನ ಪೀಳಿಗೆಗೆ ಇದು ಒಂದು ಪಾಠವಾಗಲಿ  ಎಂದು ಆಶಿಸುತ್ತ  ನಿರಾಶೆಯಿಂದ ಪಟ್ಟಣದ ದಾರಿ ಹಿಡಿಯುತ್ತಾನೆ 
ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020