ನವಪರ್ವ ಬಳಗ ಸ್ಪರ್ಧೆಗಾಗಿ
ವಿಷಯ . ವನದೆಡೆಗೆ ನಮ್ಮ ಪಯಣ
ವನದ ಸೊಬಗು (ಮಕ್ಕಳ ಕವನ)
ಗೆಳೆಯರು ನಾವು
ಜತೆಯಲಿ ಸೇರಿ
ಹೊರಟೆವು ಅಂದು ವನಡೆಡೆಗೆ
ಹಸಿರಿನ ಕಾನನ
ತಂಪಿನ ಗಾಳಿಯು
ಮನಕೆ ಮುದವನು ಕೊಡುತಿತ್ತು
ಕಾಡಿನ ಮರದಲಿ
ಗೂಡನು ಕಟ್ಟಿದ
ಹಕ್ಕಿಗಳಿಂಚರ ಕಿವಿಗಳಿಗಿಂಪನು ತಂದಿತ್ತು
ಅರಳಿದ ಹೂಗಳ
ಗಂಧವು ತುಂಬಿ
ಮೂಗಿನ ಹೊಳ್ಳೆಯು ಅರಳಿತ್ತು
ಝುಳು ಝುಳು
ಹರಿಯುವ ನದಿಯನು
ಕಾಣುತ ಮನದಲಿ ಸಂತಸ ತುಂಬಿತ್ತು
ಗರಿಗಳ ಬಿಚ್ಚಿ
ಕುಣಿಯುವ ನವಿಲು
ಸೊಬಗನು ಕಣ್ಣಿಗೆ ತಂದಿತ್ತು
ಚಂಗನೆ ನೆಗೆಯುವ
ಜಿಂಕೆಯ ದಂಡು
ಖಗಮಿಗಗಳ ನೋಡುತ ಸಮಯವು ಸರಿದಿತ್ತು
ಹಸಿರಿನ ವನವು
ಉಸಿರನು ಕೊಡುವುದು
ಉಳಿಸುತ ಬೆಳೆಸಬೇಕು ಅದನು ನಾವೆಲ್ಲ
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment