ಬಾ ವರುಣ
ಓ ಮೇಘವೇ ಬಾಂದಳದಲ್ಲಿ ಓಡುವೆ ನೀನು ಎಲ್ಲಿಗೆ?
ಬಿರುಬಿಸಿಲಲಿ ಬೆಂದು ನಿನಗಾಗಿ ಕಾದಿರುವುದು ತಿಳಿಯದೆ?
ಮಳೆ ಮೋಡವ ಕಂಡು ಆಸೆಯಲಿ ತಲೆಬಾಗಿ ನಿಂತಿರುವೆ
ಬಂದೊಮ್ಮೆ ತಬ್ಬಿ ಸಂತೈಸು ನನ್ನಾ ಓ ಮೇಘವೇ
ಒಣಎಲೆಗಳ ಉದುರಿಸಿ ಕಾದಿರುವೆ ನಿನಗಾಗಿ
ಹಸಿರೆಲೆ ಚಿಗುರಿ ಹಬ್ಬಲುನೀ ಬರಬೇಕಾಗಿದೆ ವರುಣಾ
ನಿನ್ನೊಲುಮೆಯಿಲ್ಲದೆ ನಾ ಹೇಗೆ ಬಾಳಲಿ ಇನಿಯಾ
ನನ್ನೊಡಲಲಿ ಗೂಡು ಕಟ್ಟಿರುವ ಹಕ್ಕಿಗಳಿಗೆ ಏನು ಹೇಳಲಿ
ಸುರಿಸು ನೀ ಒಲವ ಧಾರೆಯ ಹರಿಸು ನಿನ್ನ ಪ್ರೇಮಾಮೃತವ
ನೀ ಬಂದು ತಬ್ಬಿದರೆ ಮೈಯಲ್ಲಿ ಎಂತದೋ ಪುಳಕ
ಚಿಗುರಿ ಹಬ್ಬಿ ಅರಳಿಸುವೆ ಚೆಲು ಹೂಗಳ ನನ್ನೊಡಲಲಿ
ಭೂರಮೆಯ ಚೆಲುವ ಕಂಡು ಕಣ್ಣು ತುಂಬಲಿ
ಬೇಗ ಬಾ ಓ ಮೇಘವೇ ಸುರಿಸು ವರ್ಷಧಾರೆಯ
ಬಂದೊಮ್ಮೆ ಸಂತೈಸು ನನ್ನ ಒಡಲ ಉರಿಯ
ಕಾದಿರುವೆ ನಿನಗಾಗಿ ನೀ ಬರುವ ದಾರಿಯಲಿ ನಸುನಗೆಯ ಚೆಲ್ಲಿ
ಪಂಕಜಾ.ಕೆ. ಮುಡಿಪು
Comments
Post a Comment