ಗಜಲ್ 18..6 2020
ನವಿಲುಗರಿಯನು ಧರಿಸಿ ಬಂದೆಯಾ ಮಾಧವ
ಮುರಳಿಗಾನದಿ ಒಲಿಸಿ ಕೊಂಡೆಯಾ ಮಾಧವ
ಸಪ್ತವರ್ಣದ ಬಣ್ಣದಿಂದ ತುಂಬಿದ ಗರಿಯದು
ನಿನ್ನ ಕಿರೀಟದಲಿ ಅದನು ಇರಿಸಿದೆಯಾ ಮಾಧವ
ರಾಧೆಯೊಲವನ್ನು ಪಡೆಯಲೆಂದು ಈ ಅಲಂಕಾರವೇ
ನಿನ್ನ ಮೋಹದ ಬಲೆಯಲ್ಲಿ ಕೆಡವಿದೆಯಾ ಮಾಧವ
ಯಮುನಾ ತೀರದಲ್ಲಿ ದಾರಿಯನ್ನು ಕಾಯುತಿರುವೆ
ಬೇಗ ಬಂದು ಒಲವ ಸುಧೆಯ ಹರಿಸೆಯಾ ಮಾಧವ
ಪಂಕಜಾಕ್ಷಿಯ ಮನವು ಸಂಭ್ರಮ ಗೊಂಡಿದೆ
ಬರಿದಾದ ಮಡಿಲನ್ನು ತುಂಬಿದೆಯಾ ಮಾಧವ
ಪಂಕಜಾ.ಕೆ.ಮುಡಿಪು
Comments
Post a Comment