ಸ್ಪರ್ಧೆಗಾಗಿ
ವಿಷಯ ಹಬ್ಬ
ಮಂಗಳ ಗೌರೀ ವ್ರತದ ಮಹಿಮೆ
ಸಮನ್ ಮತ್ತು ಸುವರ್ಣ ರದು ಅನ್ಯೋನ್ಯ ದಾಂಪತ್ಯ ಪ್ರತೀ ವರ್ಷ ಶ್ರಾವಣ ಮಾಸದ ಮಂಗಳಗೌರಿ ವ್ರತವನ್ನು ಬ್ ನಿಷ್ಠೆಯಿಂದ ಮಾಡುತ್ತಿದ್ದ ಸುವರ್ಣಳಿಗೆ ಮಂಗಳಗೌರಿಯ ಬಗ್ಗೆ ಅತ್ಯಂತ ಶ್ರದ್ದಾಭಕ್ತಿ ಗಂಡನ ಆಯುಷ್ಯ ಆರೋಗ್ಯಕ್ಕಾಗಿ ತಪ್ಪದೆ ದೇವಿಯಲ್ಲಿ ಬೇಡುತ್ತಿದ್ದಳು. ಅದೊಂದು ದಿನ ಸಮನ್ ಆಫೀಸಿನಿಂದ ಬರುವಾಗ ಆಪಘಾತವಾಗಿ ತೀವ್ರ ರಕ್ತಸ್ರಾವದಿಂದ ಕೊನೆಯುಸಿರು ಎಳೆಯುವ ಪ್ರಯತ್ನದಲ್ಲಿದ್ದ. ಅವನು ಬದುಕುವ ಆಸೆಯನ್ನು ಬಿಟ್ಟ ವೈದ್ಯರು ಅವನನ್ನು ಮನೆಗೆ ಕರೆದೊಯ್ಯಲು ತಿಳಿಸಿದರು ಗಂಡನ ಸ್ಥಿತಿ ಕಂಡು ದುಃಖತಪ್ತಳಾದ ಸುವರ್ಣ ಮಂಗಳಗೌರಿಯನ್ನು ಅನನ್ಯ ಭಕ್ತಿಯಿಂದ ಬೇಡಿಕೊಳ್ಳುತ್ತಾ ಕಣ್ಣು ಮುಚ್ಚಿ ದೇವರ ಕೋಣೆಯಲ್ಲಿ ಕುಳಿತು ಬಿಟ್ಟಳು ಅವಳ ಕಣ್ಣಿನಿಂದ ಧಾರಾಕಾರ ನೀರು ಸುರಿಯುತ್ತಿತ್ತು .ಇದ್ದಕ್ಕಿದ್ದಂತೆ ಸಮನ್ ಕಣ್ಣು ಬಿಟ್ಟು ಸುತ್ತಲೂ ನೋಡಿ ಸಣ್ಣಗೆ ನರಳುವ ಸ್ವರ ಕೇಳಿ ಸಂತೋಷದಿಂದ ಸುವರ್ಣ ಗಂಡನ ಹತ್ತಿರ ಹೋಗಿ ಮಂಗಳ ಗೌರಿಯ ಪ್ರಸಾದವನ್ನು ಅವನ ಹಣೆಗೆ ಇಟ್ಟು ತನ್ನ ಸ್ನೇಹಿತೆಯ ಸಹಾಯದಿಂದ ಪುನ ಆಸ್ಪತ್ರೆಗೆ ಸೇರಿಸಿದಳು ಮಂಗಳಗೌರಿಯ ಕೃಪೆಯಿಂದ ಸಮನ್ ಒಂದೇ ವಾರದಲ್ಲಿ ಗುಣಮುಖನಾಗಿ ಮನೆಗೆ ಬರುವಂತಾದನು
99 ಶಬ್ದ
ಪಂಕಜಾ.ಕೆ. ಮುಡಿಪು
Comments
Post a Comment