43 ಹಸಿರೇ. ...ಉಸಿರು ಮುಂಗಾರು ಮಳೆ ಪ್ರಾರಂಭವಾಯಿತೆಂದರೆ ಮನೆಯ ಸುತ್ತು ಮುತ್ತು ಗಿಡಗಳನ್ನು ನೆಟ್ಟು ಬೆಳೆಸುವುದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಕೈತೋಟ ಮಾಡುವುದು ಸುಲಭವಲ್ಲ .ಅದಕ್ಕೆ ಶ್ರದ್ಧೆ ಶ್ರಮ ಅಸಕ್ತಿಹಾಗೂ ಸಮಯ ಬೇಕು ಆಸಕ್ತಿ ಇದ್ದವರಿಗೆ ಕೈತೋಟದಲ್ಲಿ ಕೆಲಸಮಾಡುತ್ತಿದ್ದರೆ ಸಮಯ ಸರಿದುದೇ ತಿಳಿಯುವುದಿಲ್ಲ. ಹಿಂದಿನ ವರ್ಷ ಜತನದಿಂದ ಕಾದಿಟ್ಟ ತರಕಾರಿ ಬೀಜಗಳನ್ನು ಹಾಕಿ ಅದು ಇರುವೆಗಳ ಪಾಲಾಗದಂತೆ ಜಾಗ್ರತೆವಹಿಸಿ ಉತ್ತಮವಾಗಿ ಬೆಳೆದು ಫಲ ಸಿಗುವಂತೆ ಮಾಡುವುದು ಸುಲಭದ ಕೆಲಸವಲ್ಲ. ಸ್ಥಳಾವಕಾಶವಿದ್ದರೆ ನಮ್ಮ ಮನೆಯ ಹಿತ್ತಲಿನಲ್ಲಿ ಹಲವಾರು ಹೂಗಿಡಗಳನ್ನು , ಔಷಧೀಯ ಗಿಡಗಳನ್ನು, ತರಕಾರಿ ಹಣ್ಣಿನ ಗಿಡಗಳನ್ನೂ ಬೆಳೆಸಬೇಕು . ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರ್ಕೆಟ್ ನಿಂದ ತರುವ ಶ್ರಮಮತ್ತು ಹಣದ ಉಳಿತಾಯವಾಗುತ್ತದೆ,ಅಲ್ಲದೆ ಸಾವಯವ ತರಕಾರಿ ಸಿಗುತ್ತದೆ .ಮನೆಯಲ್ಲೇ ಬೆಳೆಸಿದ ಹಸಿರು ಸೊಪ್ಪು ತರಕಾರಿಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯವರ್ಧಕವೂ ಆಗಿರುತ್ತದೆ ಹೂವು ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ ಮನೆಗೆ ಬೇಕಾದ ಹೂವು ತರಕಾರಿಗಳನ್ನು ಕೊಂಡು ತರಬೇಕಾಗಿಲ್ಲ .ಮಳೆಗಾಲದಲ್ಲಿ ಅವುಗಳ ಆರೈಕೆ, ಬೇಸಿಗೆಯಲ್ಲಿ ನೀರುಣಿಸುವ ಕೆಲಸ, ಇತ್ಯಾದಿ ಮಾಡುವುದರಿಂದ ಶರೀರಕ್ಕೆ ಬೇಕಾದ ವ್ಯಾಯಾಮವು ಸಿಕ್ಕಿ ಶರೀರ ಆರೋಗ್ಯವಾಗಿರಲು ಸಹಕಾರಿಯಾಗುತ