Skip to main content

ಲೇಖನ

 ಲೇಖನ
 
ವಿಷಯ..ಹಾಸ್ಯ ಪ್ರಜ್ಞೆಯಿಂದಾಗುವ ಆರೋಗ್ಯ ಮತ್ತು ಇತರ ಲಾಭಗಳು

ಹಾಶ್ಯ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ ಹಾಸ್ಯವಿಲ್ಲದಿದ್ದರೆ ಜೀವನ ನೀರಸವಾಗಬಹುದು.    ಆದ್ದರಿಂದ ನಾವು  ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಪುರಾಣ ಕಾಲದಿಂದಲೂ ಹಾಸ್ಯಕ್ಕೆ ಮೊದಲ ಪ್ರಾಶಸ್ಯವಿದೆ.ರಾಜ ಮಹಾರಾಜಾರೂ ತಮ್ಮ ಒತ್ತಡ ನಿವಾರಣೆಗಾಗಿ ತಮ್ಮ ಆಸ್ಥಾನದಲ್ಲಿ ವಿದೂಷಕರನ್ನು ನೇಮಿಸಿ ಅವರ ಹಾಸ್ಯಕ್ಕೆ ನಕ್ಕು ಹಗುರವಾಗುತ್ತಿದ್ದರು.ಇಂದಿನ ಒತ್ತಡದ ಬದುಕಿಗೆ ಹಾಸ್ಯ ಅನಿವಾರ್ಯ ,ಆದ್ದರಿಂದ ಮಹಾನಗರಗಳಲ್ಲಿ ನಗಲು ಮತ್ತು ನಗಿಸಲಿಕ್ಕೆಂದೇ ಕ್ಲಬ್ ಗಳು ತಲೆಯೆತ್ತಿತುತ್ತದೆ .ಜನರು ಈ ಕ್ಲಬ್ ನ ಸದಸ್ಯರಾಗಿ ಅಲ್ಲಿ ನಕ್ಕು ತಮ್ಮ ಬೇಸರ ನೋವು ಒತ್ತಡವನ್ನು ಕಳೆದುಕೊಂಡು ಹಗುರವಾಗುತ್ತಿದ್ದಾರೆ.
                     ನಗು ಎನ್ನುವುದು ದೇವರು ಮನುಷ್ಯನಿಗೆ ಕೊಟ್ಟ ವರಎಂದರೆ ಅತಿಶಯೋಕ್ತಿಯಲ್ಲ.  ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿಗಳಾಗಲೀ ಪಕ್ಷಿಗಳಾಗಲಿ  ನಗಲಾರವು. ನಗುವಿನಲ್ಲಿ ಒಂದು ಮಾಂತ್ರಿಕ ಶಕ್ತಿಯಿದೆ,ಇದರಿಂದ ಅನೇಕ ಮಾನಸಿಕ ಹಾಗೂ ಶಾರೀರಿಕ ರೋಗಗಳು ಗುಣವಾಗುವುದು. ನಗು ಸಾರ್ವತ್ರಿಕ ಒಬ್ಬರ ಮುಖದ ನಗು ಇನ್ನೊಬ್ಬರ ಮುಖದಲ್ಲೂ ನಗೆಯನ್ನು ತಾರದೆ ಇರದು.ಕೆಟ್ಟವರನ್ನೂ ಒಳ್ಳೆಯವರನ್ನಾಗಿಸುವ ವೈರಿಗಳನ್ನೂ ಮಿತ್ರರನ್ನಾಗಿಸುವ ಶಕ್ತಿ ನಗುವಿಗಿದೆ.ನಗುವಾಗ ಮುಖದ ಸ್ನಾಯುಗಳು ಸಡಿಲಗೊಳ್ಳುತ್ತದೆ ಇದರಿಂದ ಮುಖದ ಅಂದ ಹೆಚ್ಚುವುದು,ವಯಸ್ಸಿನ ಚಿಹ್ನೆಗಳಾದ ಸುಕ್ಕುಗಳು ಬಾರದಂತೆ ತಡೆಹಿಡಿದು,ಮುಖ ಯೌವನದಿಂದ ಕಂಗೊಳಿಸುವುದು.ಚಿಂತೆ ಬೇಸರ ನೋವು ಎಲ್ಲಾದಕ್ಕೂ ನಗು ಎನ್ನುವುದು ಒಂದು ಸಿದ್ದ ಔಷದ ಇದ್ದಂತೆ. ನಗೆಯು ಯಾರಿಂದಲೂ ಕದಿಯಲಾಗದ ಒಂದು ಅಮೂಲ್ಯ ಆಭರಣ.ನಗುತ್ತ ನಗಿಸುತ್ತಾ  ಇರುವವರನ್ನು ಎಲ್ಲರೂ ಮೆಚ್ಚುತ್ತಾರೆ.ನಗುಮುಖ ಎಲ್ಲರನ್ನೂ ಆಕರ್ಷಿಸುತ್ತದೆ. ಒತ್ತಡದ ಬದುಕಿನಲ್ಲಿ ನಗುವೇ ನಮ್ಮ ಆಪ್ತ ಮಿತ್ರ ನಗು ದೀರ್ಘಾಯುಷ್ಯದ ಗುಟ್ಟು, ಆದ್ದರಿಂದ ನಾವು ನಗು ನಗುತ್ತಾ ಇತರರನ್ನು ನಗಿಸುತ್ತಾ ದೀರ್ಘಾಯುಷಿಗಳಾಗಿ ಬಾಳೋಣ
                     
ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020