*ಗೀತಾಚಾರ್ಯ ಶ್ರೀ ಕೃಷ್ಣ*
ಕುರುಕ್ಷೇತ್ರದಿ ಯುದ್ಧ ನಡೆಯಲು
ರಥದ ಸಾರಥಿ ಕೃಷ್ಣ ನಾಗಲು
ಸಮರ ಸಾರುತ ಪಾರ್ಥ ತಾ ರಣಕೆ ಬಂದಿಹನು
ಯುದ್ದ ಭೂಮಿಯಲೆಲ್ಲ ನೆರೆದಿಹ
ತನ್ನವರ ಕಾಣುತಲಿ. ಪಾರ್ಥನು
ಶಸ್ತ್ರ ತ್ಯಾಗವ ಮಾಡಿ ತಾವಿಷಾದ ತೋರಿದನು
ಆಗ ಪಾರ್ಥನ ಕಂಡು ಕೇಶವ
ಭಗವದ್ಗೀತೆಯ ಸಾರವುಸುರುತ
ದುಃಖದಿಂದಲಿ ಕುಳಿತ ಪಾರ್ಥಗೆ ಬುದ್ಧಿ ಹೇಳಿದನು
ಕಷ್ಟ ಸಮಯದಿ ಸಹಾಯ ಹಸ್ತವ
ಕೊಟ್ಟು ಕಾಯ್ದಿಹ ಹರಿಯ ಮಾತಿಗೆ
ಸೋತ ಪಾರ್ಥನು ಯುದ್ಧ ಮಾಡಲು ಮನವ ಮಾಡಿದನು
ಬಾಲ್ಯದಿಂದಲೇ ಲೀಲೆ ತೋರುತ
ಬಾಯ ತೆರೆಯುತ ಜಗವ ತೋರಿದ
ಕೃಷ್ಣ ದೇವರು ಜತೆಯಲಿರಲು ಜಯವು ಪಾಂಡವಗೆ
ಶಂಖನಾದವ ಮಾಡಿ ಕೇಶವ
ಪಾರ್ಥನನು ನಿಮಿತ್ತ ಮಾಡುತ
ದುಷ್ಠ ಜನರನು ತರಿದು ಕೊಂದನು ರಣರಂಗದಲೀ
*ಪಂಕಜಾ. ಕೆ.ರಾಮಭಟ್*
Comments
Post a Comment