Skip to main content

Posts

Showing posts from September, 2026

ನಯನ ಮನೋಹರ ನೋಟ

ನಯನ ಮನೋಹರ ನೋಟ ಚಂದದ ಕುಸುರಿಯ ಕೆಲಸವ ಮಾಡಿದ ತೆರದಲಿ ಹರಡಿದೆ ಮುಗಿಲು ಕೆಳಗಡೆ ತುಂಬಿದೆ ಕೆಂಪನೆ ಬಣ್ಣದ ಗಿಡಗಳು ಹರಡಿದ ಬಯಲು ರಸಿಕರ ಕಂಗಳ ಸೆಳೆಯುವ ನೋಟವು ಸ್ವರ್ಗದ ಐಸಿರಿಯಂತಿಹುದು ಸೃಷ್ಟಿಯ ಸೊಬಗಿನ ಸುಂದರ ನೋಟವು ಮೈಮನ  ಮರೆಸುತಲಿಹುದು ಬೇಸರಗೊಂಡಿಹ ಮನದಲಿ ಕನಸನು ಮೂಡಿಸಿ ಬಿಡುತಿದೆ ಚೆಲುವು ಮುದವನು ಕೊಡುತಲಿ ಹೊಸತನ ತುಂಬಿಸಿ ಮನವನು ತಣಿಸುತ ನಲಿವು ಸೂರ್ಯನ ಬಿಸಿಲಿಗೆ ಹೊಳೆಯುವ ರಸ್ತೆಯು ಸ್ವಚ್ಛ ಸುಂದರ ಪರಿಸರವಿದು ತರತರ ಬಣ್ಣದ ಹೂಗಳ ರಾಶಿಯು ಕಣ್ಮನ ಸೆಳೆಯುತಲಿಹುದು ಪಂಕಜಾ.ಕೆ. ರಾಮಭಟ್ ಮುಡಿಪು