ಅಯೋದ್ಯೆಯಲ್ಲಿ ರಾಮ ಮಂದಿರ
ಕೋಸಲ ದೇಶದ ರಾಜನು ದಶರಥ
ತನ್ನಯ ಮಡದಿಯರೊಡನೆಯೆ ಕೂಡುತ
ಬನ್ನವ ಪಡದೆಯೇ ಬದುಕುತಲಿದ್ದನು
ಅಯೋಧ್ಯೆ ನಗರದಲಿ ||೦೧||
ಮಹಾ ಪರಾಕ್ರಮಿಯಾದ ರಾಜಗೆ
ಮಕ್ಕಳಿಲ್ಲದ ಚಿಂತೆಯು ಕಾಡಲು
ಕುಲಗುರು ವಸಿಷ್ಟರಾಣತಿಯಂತೆಯೆ
ಮಾಡಿದ ಯಾಗವನು ||೦೨||
ಭಕುತಿ ಬಾವದಲಿ ಯಜ್ಞವ ಮಾಡಲು
ಯಜ್ಞದ ಕುಂಡದಿ ದಿವ್ಯ ಪುರುಷನು
ಬಂದು ಚಾಚಿದನು ರಾಜನ ಕಡೆಗೆ
ಪಾಯಸದ ಬಟ್ಟಲನು ||೦೩||
ಕರದಲ್ಲಿರಿಸಿದ ಪ್ರಸಾದ ಪಾಯಸ
ಮಡದಿಯರೆಲ್ಲರಿಗೆ ಹಂಚಿದನು
ಪ್ರಸಾದ ಫಲದಿಂ ಸತಿಯರೆಲ್ಲರೂ
ಹೆತ್ತರು ಪುತ್ರರನು ||೦೪||
ಶ್ರೀರಾಮ ಜನಿಸಿದ ಪುಣ್ಯ ಸ್ಥಳದಲಿ
ರಾಮನ ಮಂದಿರ ತಲೆಯನ್ನೆತ್ತುತ
ರಾಮಜನ್ಮ ಭೂಮಿಯದು ಎನ್ನುತ
ಪ್ರಸಿದ್ದಿ ಪಡೆದಿಹುದು ||೦೫||
ಮತಾಂಧ ಮೊಘಲನು ರಾಜ ಬಾಬರನು
ಕೆಡವಿಯೆ ಬಿಡುತಲಿ ರಾಮ ಮಂದಿರವ
ಕಟ್ಟಿಯೆ ಬಿಟ್ಟನು ಮಸೀದಿಯನ್ನು
ತನ್ನಯ ಹೆಸರಲ್ಲೇ ||೦೬||
ವಾದ ವಿವಾದಗಳಿಗೆಡೆ ಕೊಡುತಲಿ
ದಶಕ ದಶಕಗಳು ಕಳೆದೂ ಹೋದವು
ಸಾವಿರ ಸಾವಿರ ಕರಸೇವಕರು
ಒಡೆದರು ಕಟ್ಟಡವ ||೦೭||
ಕೂಡಿದರೆಲ್ಲರು ಒಂದೊಂದಾಗಿಯೆ
ಕಟ್ಟಡ ಕಟ್ಟುವ ಸಾಮಗ್ರಿಯೊಂದಿಗೆ
ಗೆದ್ದು ಭೂಮಿಯ ಗೈದು ಬಿಟ್ಟರು
ಶಂಕು ಸ್ಥಾಪನೆಯ ||೦೮||
ಶಿಲೆಗಳು ಸಾರಿವೆ ರಾಮನ ಮಹಿಮೆಯ
ನಾಗರ ಶೈಲಿಯ ವಾಸ್ತು ಶಿಲ್ಪದಲಿ
ಕಟ್ಟಿದ ಆಕೃತಿ ಜಗತಿನ ಜನಗಳ
ಗಮನವ ಸೆಳೆದಿಹುದು ||೦೯||
ರಾಮನಾಮದ ಉದ್ಘೋಷ ಮೊಳಗುತ
ಪ್ರಪಂಚದೆಲ್ಲೆಡೆ ಮಾರ್ದನಿ ಮೂಡಿಸಿ
ಮತ್ತೆ ತಲೆಯನ್ನೆತ್ತಿದೆ ಅಯೋಧ್ಯೆಯಲ್ಲಿ
ಶ್ರೀ ರಾಮಗೆ ಮಂದಿರವು||೧೧||
ಬಂದಿಹ ಅಡೆತಡೆಗಳೆಲ್ಲವ ನೂಕುತ
ಜಯವನು ಗಳಿಸುತ ಕಟ್ಟಿಯೆ ಬಿಟ್ಟರು
ಸೊಗವನು ತೋರುವ ರಾಮನ ಮಂದಿರ
ಜನ್ಮ ಭೂಮಿಯಲಿ ||೧೧||
ಕೋಟಿ ವರ್ಷಗಳ ಚರಿತ್ರೆ ಹೊಂದಿದ
ಎರಡು ಶಿಲೆಗಳನು ಮೂರ್ತಿಯನಾಗಿಸಿ
ಪ್ರಾಣ ಪ್ರತಿಷ್ಠೆಯ ಮಾಡ್ವರು ಭಕುತರು
ಹೆಮ್ಮೆಯಯೋದ್ಯೆಯಲಿ ||೧೨||
ಜನವರಿ ಇಪ್ಪತ್ತೆರಡರ ಶುಭದಿನ
ಮನೆ ಮನದಲ್ಲೂ ಸ್ಥಾಪನೆಗೊಳ್ಳುವ
ರಘುಕುಲ ತಿಲಕನು ಲಕ್ಷ್ಮಣನನುಜನು
ರಾಮಚಂದಿರನು ||೧೩||
ಬೆಳಗಿರಿ ದೀಪವ ಮನೆ ಮನೆಯಲ್ಲೂ
ಮಾಡಿರಿ ರಾಮನ ನಾಮದ ಜಪವನು
ಪಾಲಿಸುತವನಾ ಆದರ್ಶಗಳನು
ಸಲ್ಲಿಸಿ ಹರಕೆಯನು ||೧೪||
ಶತ ಶತಮಾನ ಸಹಿಸಿದ ಕಷ್ಟವ
ನೆನಪಿಗೆ ತರುತಲಿ ಪುರ ಜನರೆಲ್ಲರು
ಉರಿಸಿರಿ ಐದು ದೀಪಗಳನ್ನು
ತಮ್ಮಯ ಮನೆಗಳಲಿ ||೧೫||
ಶ್ರೀಮತಿ.ಪಂಕಜಾ.ಕೆ. ರಾಮಭಟ್.
Comments
Post a Comment