ಶರಣು ಬಂದಿಹೆ ದೇವಿ
ಕೊಡು ನಮಗೆ ವರವ
ಮನದ ಕಲ್ಮಶ ಕಳೆದು
ಸದ್ಭಕ್ತಿ ಸನ್ಮತಿಯ
ಕೊಟ್ಟುಕಾಯು ನೀ ತಾಯೇ
ಶುಕ್ರವಾರದ ಶುಭದಿನದಂದು
ಪೂಜೆಗೊಳ್ಳುವೆ ದೇವಿ
ವರ್ಣಿಸಲು ಹೇಗೆ
ನಿನ್ನರೂಪವ ಜಗದಂಬೆ
ಭಕ್ತಿಭಾವದಿಂದ ಪೂಜಿಸಲು
ಒಲಿವೆ ನೀ ಜಗದೀಶ್ವರಿ
ಬಂಗಾರ ಮೈಯವಳೇ
ಮೈತುಂಬ ಆಭರಣ ಧರಿಸಿ
ರುವವಳೇ ತಾವರೆ ಹೂವಿನ ಮೇಲೆ
ಪವಡಿಸಿರುವ ಪದ್ಮನಾಭನ ರಾಣಿ
ಪದ್ಮಪಾಣಿಯಾಗಿ ಕಾಯುವಳೇ
ನಗುಮುಖದರಸಿ
ನಗುವಿನಭಾರಣದಿಂದ
ಮೈತುಂಬ ನಗಧರಿಸಿ
ಕೆಂಪುಸೀರೆಯ ನುಟ್ಟ ಕನಕಾಂಬರಿ
ಕರಮುಗಿದು ಬೇಡುವೆ ತಾಯೇ
ಪಾಲಿಸೆಮ್ಮ ಮಂದರ ಧರನರಸಿ
ಸುರಹರಪೂಜಿತೆ ದುರಿತ ನಿವಾರಿಣಿ
ಅಂಬುಜಮುಖಿಪಾಪವಿನಾಶಿನಿ
ತಾಪನಿವಾರಿಣಿ ಜಗನ್ಮಾತೆ
ಕರುಣಿಸೆಮ್ಮ ಹರಿಯರಮಣಿ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment