[13/01, 10:13 PM] pankajarambhat: ಕಾಗೆ
ಬೆಳಗಿನ ಜಾವವೇ
ಬೇಗನೆ ಏಳುತ
ಪರಿಸರ ಶುಚಿಯನು ಮಾಡುವುದು
ಕಾಳನು ಕಂಡರೆ
ಕಾ ಕಾ ಎನುತ
ತನ್ನಯ ಬಳಗವ ಕರೆಯುವುದು
ಮರದಲ್ಲಿ ಕುಳಿತು
ಕತ್ತನು ಕೊಂಕಿಸಿ
ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು
ತನ್ನಯ ಮನೆಯಲಿ
ಕೋಗಿಲೆ ಮರಿಗೂ
ಕಾವನು ಕೊಡುತ ಬೆಳೆಸುವುದು
ಕಪ್ಪನೆ ಇದ್ದರೂ
ಚೊಕ್ಕಟ ವಿರುವ
ಗುಣವನು ತಾನು ಕಲಿತಿಹುದು
ಏನೇ ಕಂಡರೂ
ಬಳಗವ ಕರೆಯುತ
ಹಂಚಿಯೇ ಅದನು ತಿನ್ನುವುದು
ಕಾಗೆಯ ಕಂಡರೆ
ಅನಿಷ್ಟವೆನುತ
ದೂರಕೆ ಓಡಿಸುತ್ತಿರುವರು
ಶ್ರಾದ್ಧದ ದಿನದಲಿ
ಕಾಗೆಯ ಕರೆಯುತ
ಕಾ ಕಾ ಎನುತ ಕಾಯುವರು
ಸ್ವಾರ್ಥ ಬುದ್ಧಿಯ
ಮನುಜ ಕಲಿವನೆ
ನಿನ್ನಯ ಒಳ್ಳೆಯ ಗುಣಗಳನು
ಹಕ್ಕಿಗಳಲ್ಲಿ ನೀನೆ
ಗುಣದಲಿ ಶ್ರೇಷ್ಠವಾಗಿರುವೆಯಲ್ಲ
ಕೊಡದಿಹರೇಕೆ ಮನ್ನಣೆ ಯನ್ನು ಜಗದ ಜನರು ನಿನಗೆ
ಪಂಕಜಾ.ಕೆ
[13/01, 10:17 PM] pankajarambhat: ನನ್ನ ಪರಿಚಯ ಗಜಲ್
ನಾನಾಗಿದ್ದೆ ಅಂಚೆ ಇಲಾಖೆಯ ದಕ್ಷ ಕೆಲಸಗಾತಿ
ಸ್ವಯಂ ನಿವೃತ್ತಿಯ ನಂತರ ಸಂಪೂರ್ಣ ಮನೆಯೊಡತಿ
ನನ್ನ ಮೊದಲ ಕವನ ಸಂಕಲನ ಸಾವಿತ್ರಿ
ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ
ಹೊಲಿಗೆ ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ
ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ
ದಕ್ಷಿಣ ಕನ್ನಡದ ಮುಡಿಪು ಮೆಚ್ಚಿನ ನನ್ನೂರು
ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂಪತಿಗಳ ಪ್ರೇಮ ಜ್ಯೋತಿ
ಶ್ರೀ ರಾಮನಂತಿರುವ ಪ್ರೀತಿಸುವ ಪತಿ ಕಬ್ಬಿನಹಿತ್ತಿಲ ರಾಮ
ಗುರು ಹಿರಿಯರ ಶುಭಾಶೀರ್ವಾದದಲಿ ನಾನವರ ಸತಿ
ಅರತಿಗೊಬ್ಬಳು ಕೀರ್ತಿಗೊಬ್ಬ ಇಬ್ಬರು ಮಕ್ಕಳ ತಾಯಿ
ತಿಳಿದುಕೊಳ್ಳಬೇಕೆನ್ನುವ ತುಡಿತವಿರುವ ಕನಸುಗಾತಿ
ಮನೆ ಮಂದಿಯ ನಿರಂತರ ಪ್ರೋತ್ಸಾಹವಿಹುದು ಪಂಕಜಗೆ
ಇಂದೀಗ ಕಲಿತು ಸಾಧಿಸುವ ಆಸಕ್ತಿ ಇರುವ ಛಲಗಾತಿ
ಪಂಕಜಾ.ಕೆ.
ಲ್
...
...
ಬಿಳಿಯ ಕಮಲ ಚಿತ್ರ ಸ್ಪರ್ಧೆ
ನೈದಿಲೆ
ಬಿಳಿಯ ಕಮಲವು
ಸ್ಪರ್ಧೆಗಿಳಿದಿದೆ
ಬೆಳದಿಂಗಳ ಜತೆಯಲಿ
ಚಂದ್ರ ಕಾಂತಿಯು
ಬೀಳುತಲಿರಲು
ಮೊಗವ ಅರಳಿಸಿ ನಲಿದಿದೆ
ಲಕ್ಷ್ಮಿ ದೇವಿಯ
ಪಾದಕಮಲಕೆ
ಅರ್ಪಣೆಯು ತಾನೆನುತಿದೆ
ಶುಭ್ರ ಬಿಳಿಯಲಿ
ನಗುತ ತಾನು
ಬಾನ ಚಂದಿರನನ್ನು ಕರೆದಿದೆ
ನಗುವ ಬೀರುವ
ಮೊಗದ ಸೊಬಗಿಗೆ
ಸಾಟಿಯಾವುದು ಇಲ್ಲವು
ಪಂಕಜಾ.ಕೆ
[21/01, 3:31 PM] pankajarambhat: ಸರ್ ನೀವು ತಪ್ಪು ತಿಳಿದುಕೊಂಡಿರಿ ಬಹುಮಾನ ಎಂದರೆ ಖರ್ಚು ಮಾಡಿ ಕೊಡುವ ಬಹುಮಾನವಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿದವರ ಕವನಗಳು ಅತ್ತ್ಯುತ್ತಮ ಉತ್ತಮ ಮೊದಲ ಎರಡನೆಯ ಮೂರನೆಯ ಹಾಗೂ ಮೆಚ್ಚುಗೆಯ ರೀತಿಯಲ್ಲಿ ಪ್ರಕಟಿಸುವುದು ಇದರಿಂದ ಬರೆಯುವವರಿಗೆ ಸ್ಪೂರ್ತಿ ಬಂದಂತಾಗಿ ಇನ್ನಷ್ಟು ಚೆನ್ನಾಗಿ ಬರೆಯಲು ಅನುಕೂಲವಾದೀತು ಎನ್ನುವುದು ನನ್ನ ಅಭಿಪ್ರಾಯ
[21/01, 3:42 PM] +91 99455 51423: ನಿಮ್ಮ ಸಲಹೆ ತೆಗೆದುಕೊಳ್ಳುತ್ತೇವೆ ಮೇಡಂ🙏💐
[21/01, 3:43 PM] pankajarambhat: ನನ್ನ ಸಲಹೆ ಸ್ವೀಕರಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ🙏🙏 ಬಳಗ ಬೆಳೆಯಲಿ ಹೊಸ ಹೊಸ ಕವಿ ಹೃದಯಗಳು ಬಳಗದಲ್ಲಿ ಅರಳಲಿ
[21/01, 8:12 PM] pankajarambhat: ಇರುವೆ.
(ಚಿತ್ರಕವನ ಸ್ಪರ್ಧೆಗಾಗಿ)
ಇರುವೆ ಇರುವೆ ಎಲ್ಲಿಗೆ ಹೊರಟೆ
ಸರತಿಯ ಸಾಲಲಿ ನೀನು?
ಸಕ್ಕರೆ ಕಂಡರೆ ಓಡುತ ಬರುವೆ
ಸುಳಿವನು ನಿನಗೆ ಕೊಟ್ಟವರಾರು?
ಒಗ್ಗಟ್ಟಿನಲಿ ದುಡಿಯುವೆ ನೀನು
ಜಗಳವು ಕದನವು ನಿನಲಿಲ್ಲ
ನಿತ್ಯವೂ ಜಗಳವನಾಡುವ ಮನುಜಗೆ
ಬುದ್ಧಿಯನೊಮ್ಮೆ ಕಲಿಸು
ಹಗಲಿರುಳೆನ್ನದೆ ದುಡಿಯುವೆ ನೀನು
ಕಾಳನು ಸಂಗ್ರಹಿಸುತ ದಿನವೂ
ಆಪತ್ತಿಗೆ ಕೂಡಿಡುವ ನಿನ್ನಯ ಬುದ್ದಿ
ನಮಗೂ ಒಮ್ಮೆ ಕಲಿಸು
ಕಾಳನು ಕಂಡರೆ ಸರತಿಯ ಸಾಲಲಿ
ಬಳಗವ ಕರೆಯುತ ನೀ ಬರುವೆ
ಶಿಸ್ತಿನ ಶಿಫಾಯಿಯ ತೆರದಲಿ ನಡೆಯುವ
ನಿನ್ನಯ ಗುಣ ನಮಗೂ ಒಮ್ಮೆ ಕಲಿಸು
ಪಂಕಜಾ. ಕೆ
[22/01, 7:59 PM] pankajarambhat: (ಚಿತ್ರಕವನ)
ಸ್ಪರ್ಧೆಗಾಗಿ
ಅನ್ನದ ಮಹತ್ವ
ಹಿಡಿ ಅಕ್ಕಿ ಬೆಳೆಯುವ ಕಷ್ಟ
ರೈತನಿಗೆ ಗೊತ್ತು ಅದರ ಕಷ್ಟ ನಷ್ಟ
ಶ್ರೀಮಂತಿಕೆಯ ಮಹಲಿನಲಿದ್ದರೂ
ಹಸಿವೆಯ ತಣಿಸಲು ಬೇಕು ಹಿಡಿ ಅಕ್ಕಿ
ಅನ್ನವ ಬೆಳೆಯುವ ರೈತನ ಶ್ರಮ
ಅರಿತರೆ ಮಾತ್ರ ತಿಳಿದೀತು ಅದರ ಬೆಲೆ
ಬಿಸಿಲು ಮಳೆ ಗಾಳಿಯ ಸಹಿಸುವನೀತ
ನಿತ್ಯವೂ ಕಾಯಕವ ಮಾಡುವ ಅನ್ನದಾತ
ಬರಗಾಲ ಅತಿವೃಷ್ಠಿ ಗಳ ಅಬ್ಬರದ ಆಟ
ದುಡಿದರೂ ದಕ್ಕದ ಮಧ್ಯವರ್ತಿಗಳ ಕಾಟ
ರೈತನ ಶ್ರಮವನ್ನು ಅರಿಯಬೇಕು
ಅನ್ನದ ಮಹತ್ವವನ್ನು ತಿಳಿಯಬೇಕು
ಮುಂದಿನ ಪೀಳಿಗೆಗೆ ಅದನು ತಿಳಿಸಬೇಕು
ಅನ್ನದಾತನ ಹಿರಿಮೆ ಅರಿಯಬೇಕು
ಕಷ್ಟ ನಷ್ಟಗಳಿಗೆ ಒಡ್ಡುವನು ಕೊರಳು
ಸುತ್ತಿದೆ ಸಾಲದ ಹೊರೆಯ ಉರುಳು
ಅನ್ನ ಕೊಡುವ ರೈತನ ಶ್ರಮದ ಫಲ
ಬೆಳೆದ ಬೆಳೆಗೆ ಸಿಗಬೇಕು ಪ್ರತಿಫಲ
ಪಂಕಜಾ.ಕೆ
[23/01, 8:55 PM] pankajarambhat: ಚಿತ್ರಕವನ ಸ್ಪರ್ಧ
ಮಾಗಿಯ ಬೆಳಗು
ಬೀಸುವ ಗಾಳಿಯು
ಮೈಯನು ಸವರುತ
ಕಚಗುಳಿಯಾಟವ ಆಡುತಿದೆ
ಅಂಗಳ ತುಂಬಾ ಅರಳಿದ
ಹೂಗಳು ಸೊಬಗಿನ
ನೋಟವ ತೋರುತಿದೆ
ಬಗೆ ಬಗೆ ಹೂಗಳ
ಪರಿಮಳ ಹೊತ್ತು
ತರುತಿದೆ ಬೀಸುವ ತಂಗಾಳಿ
ಹುಲ್ಲಿನ ಮೇಲೆ
ಹರಡಿದ ಇಬ್ಬನಿ
ಮುತ್ತಿನ ಮಣಿಗಳ ತೆರದಿ ತೋರುತಿದೆ
ಚುಮು ಚುಮು ಚಳಿಯಲಿ
ಮಂಜಿನ ಹನಿಯಲಿ
ಪ್ರಕೃತಿಯ ಸೊಬಗು ಕಣ್ಣನು ಸೆಳೆಯುತಿದೆ
ಮಣ್ಣಿನ ಗೋಡೆಯ
ಹಂಚಿನ ಮನೆಯಲಿ
ಬೆಚ್ಚನೆ ಭಾವವು ತುಂಬಿಹುದು
ಪಂಕಜಾ.ಕೆ.
[24/01, 4:37 PM] ಪೀರ್ ಸಾಹೇಬ್ ನವಪರ್ವ: ಎಲ್ಲರಿಗೂ ಅಭಿನಂದನೆಗಳು👏👏👏
[24/01, 6:24 PM] pankajarambhat: ಹಳ್ಳಿಯ ಸೊಬಗಿನ ಬಗ್ಗೆ ಕೊಟ್ಟ ಚಿತ್ರಕ್ಕೆ ಬರೆದ ನನ್ನ ಕವನಕ್ಕೆ ಅತ್ಯುತ್ತಮ ದ ಗರಿಯನ್ನು ತೊಡಿಸಿ ಕವಿಮನಕೆ ಇನ್ನಷ್ಟು ಕವನಗಳನ್ನು ಬರೆಯಲು ಸ್ಫೂರ್ತಿ ತುಂಬುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ🙏🙏🙏 ಸಹವಿಜೇತರಿಗೆ ಹಾಗೂ ಕವನಗಳನ್ನು ಬರೆದು ಮನತಣಿಸಿದ ಕವಿ ಬಂಧುಗಳಿಗೆ ಅಭಿನಂದನೆಗಳು💐💐💐
[24/01, 9:22 PM] pankajarambhat: ಚಿತ್ರ ಕವನ
ಪ್ರೇಮ ಗಾನ
ಮೋಹನಾಂಗನೆ
ಮುರಳಿ ಲೋಲನೆ
ಮನವ ಕದ್ದಿಹ ಚೋರನೆ
ಮದರಂಗಿಯ ಚಿತ್ತಾರದಿ
ಮನಸೆಳೆಯುತ
ಮನಕೆ ಮುದ ತುಂಬಿದೆ ಮೋಹನ
ಮುರಳಿಯ ಗಾನಕೆ
ಮೈಮರೆತು
ಬೆಳದಿಂಗಳಲಿ ನವಿಲ ನರ್ತನದಂತೆ
ಮೈಮನವು ಕುಣಿಯುತಿದೆ ಮಾಧವಾ
ಯಮುನಾ ತೀರದಲ್ಲಿ
ಬೆಳದಿಂಗಳ ತಂಪಿನಲಿ
ನಿನ್ನೊಡನಾಟದಲ್ಲಿ ಮೈಮರೆಯುತ್ತಿದೆ ಕೃಷ್ಣಾ
ಒಲವ ಸುರಿಸುವ ನಿನ್ನ
ಕಣ್ಣೋಟದ ಮೋಡಿಗೆ
ತನು ಕಂಪಿಸುತ್ತಿದೆ ಕೇಶವಾ
ಅನುದಿನವು ನಾವಿಬ್ಬರೊಂದಾಗಿ
ಯಮುನಾತೀರದಲಿ ಇರಬೇಕೆನಿಸುತ್ತಿದೆ ಮುರಳಿಲೋಲ
ಪಂಕಜಾ ಕೆ
[25/01, 6:23 PM] pankajarambhat: ಚಿತ್ರ ಕವನ ಸ್ಪರ್ಧೆ
ಜುಮುಕಿ
ನಿನ್ನ ಜುಮುಕಿಯ ಸದ್ದು
ನನ್ನ ಮನವನು ಕದ್ದು
ಮೂಡಿಸಿತು ಮನದಲ್ಲಿ
ಮಧುರ ಕಂಪನದ ಗುದ್ದು
ಗಾಳಿಗೆ ತೂಗಾಡುತಿದೆ ಜುಮುಕಿ
ತೆರೆದಿದೆಯೇ ನಿನ್ನ ಮನದ ಕಿಟಕಿ
ಹೃದಯವನ್ನು ಅರಳಿಸಿದೆ
ನಿನ್ನ ಒಲವನು ಹುಡುಕಿ
ನಿನ್ನ ಜುಮುಕಿಯ ನಾದಕೆ
ಹಾರಾಡುವ ಮುಂಗುರುಳ ಲಾಸ್ಯಕೆ
ಮೈಮನದಲಿ ತುಂಬುತಿದೆ
ಹೇಳಲಾರದ ಬಯಕೆ
ಮುದ್ದು ಮೊಗದ ಬಾಲೆ
ಕಿವಿಗಳಲಿ ತೂಗಾಡುವ ವಾಲೆ
ಮನವನ್ನು ಕೆಣಕುತಿದೆ
ನಿನ್ನ ಚೆಲು ನಗುವಿನ ಅಲೆ
ನಿನ್ನ ಚೆಂದುಟಿಯ ಮಾಟ
ಸೆಳೆಯುವುದು ನನ್ನ ಕಣ್ಣೋಟ
ಅದರಲ್ಲೇ ನೆಟ್ಟಿರುವುದು
ಅನುದಿನವು ನನ್ನ ನೋಟ
ಚೆಲುವೆ ನೀ ಒಮ್ಮೆ ನಗು
ಬಿಡು ನಿನ್ನ ಮುಖದ ಬಿಗು
ಒಲವ ರಸದ ಸವಿಯನು
ಉಣಿಸುವೆ ನೀನೊಮ್ಮೆ ಬಾಗು
ಕಾದಿರುವೆ ನಿನಗಾಗಿ ನಾನು
ನಿನ್ನ ತುಟಿಗಳಲಿ ತುಂಬಿದೆ ಜೇನು
ಅದರ ಸುಳಿಯಲ್ಲಿ ಬಿದ್ದ
ಮಧುಹೀರ ಬಯಸುವ ದುಂಬಿ ನಾನು
ಪಂಕಜಾ.ಕೆ.
[27/01, 8:13 PM] pankajarambhat: ಬಾಳಬಂಡಿ (ಚುಟುಕು)
ಸಾಗುತಿದೆ ನಮ್ಮ ಬಾಳಬಂಡಿ
ಹಳಿಯಲ್ಲೇ ಸಾಗುವ ಉಗಿಬಂಡಿ
ರೈಲು ಹಳಿ ತಪ್ಪಿದರೆ ಸಾವು ನೋವು
ಬಾಳು ಹಳಿ ತಪ್ಪಿದರೆ ಕಹಿ ಬೇವು
ಪಂಕಜಾ.ಕೆ
[28/01, 1:15 PM] pankajarambhat: ನನ್ನ ಹನಿಗವನವನ್ನು ಅತ್ಯುತ್ತಮ ಎಂದು ಪರಿಗಣಿಸಿದ ಬಳಗದ ಅಡ್ಮಿನ್ ರಿಗೆ ಧನ್ಯವಾದಗಳು🙏🙏🙏 ಉದಯೋನ್ಮುಖ ಕವಿ ಕವಾಯಿತ್ರಿಯರಿಗೆ ಬರೆಯಲು ಪ್ರೋತ್ಸಾಹಿಸಿ ಹುರಿದುಂಬಿಸುತ್ತಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏🙏 ಸಹವಿಜೇತರಿಗೆ ಅಭಿನಂದನೆಗಳು💐💐💐
[28/01, 7:11 PM] pankajarambhat: ಚಿತ್ರ ಕವನ ಸ್ಪರ್ಧೆಗಾಗಿ
ಮೈಲುಗಲ್ಲು
ಹಸಿರ ಸಿರಿಯಲ್ಲಿ ಮೈ ಚಾಚಿದೆ ರಸ್ತೆ
ರಸ್ತೆ ಬದಿ ಉದ್ದಕ್ಕೂ ಹರಡಿದೆ ಹಸಿರು ಕಾಡು
ಗುಡ್ಡ ಬೆಟ್ಟಗಳಿಂದ ಕೂಡಿದ ಸುಂದರ ಪ್ರದೇಶ
ನೀಲಾಗಾಸದ ರಮಣೀಯ ನೋಟ
ಬಾನಿನಂಚಿನಲಿ ಹರಡಿದ ಬೆಳ್ಳಿ ಮುಗಿಲಿನ ಸಾಲು
ಮೈ ಮನಕೆ ಮುದ ಕೊಡುತ್ತಿದೆಯಲ್ಲವೇ ಹೇಳು
ರಸ್ತೆ ಬದಿಯಲ್ಲಿ ಹಾಕಿರುವರು ಮೈಲಿಗಲ್ಲು
ಪ್ರಯಾಣಿಕರ ಅನುಕೂಲತೆಗದು ತೋರುಗಲ್ಲು
ರಸ್ತೆ ಉದ್ದಕ್ಕೂ ಅಲ್ಲಲ್ಲಿ ಕಾಣುವಿರಿ ಇಂತಹಕಲ್ಲು
ಬೇರೆ ಬೇರೆ ಬಣ್ಣದಿಂದ ಮನಸೆಳೆಯುವ ಕಲ್ಲು
ಪ್ರತಿಯೊಂದು ಕಲ್ಲಿಗೂ ಅದರದೇ ಭಾಷ್ಯ
ತೋರಿಸುತ್ತಿದೆ ಒಂದೊಂದು ಕಲ್ಲು ರಸ್ತೆಯ ವಿನ್ಯಾಸ
ಬಿಳಿ ಹಳದಿ ಬಣ್ಣದ ಕಲ್ಲು ಸೂಚಿಸುವುದು
ರಾಷ್ಟ್ರೀಯ ಹೆದ್ದಾರಿ ಇದೆಂದು
ಹಸಿರು ಬಿಳಿ ಬಣ್ಣವು ಹೇಳುವುದು
ರಾಜ್ಯ ಹೆದ್ದಾರಿಯಲ್ಲಿ ನೀವಿರುವಿರೆಂದು
ಬಿಳಿ ನೀಲಿ ಕಪ್ಪು ಬಣ್ಣದ ಮೈಲಿಗಲ್ಲು ಕೊಡುವುದು
ನಗರಕ್ಕೆ ಸಮೀಪ ನೀವಿರುವಿರೆಂಬ ಧೈರ್ಯ
ಕಿತ್ತಳೆ ಬಿಳಿ ಕಲ್ಲುಗಳು ಕಂಡೀತೇ ನಿಮಗೆ
ಪ್ರಧಾನಿ ಗ್ರಾಮ ರಸ್ತೆ ಯೋಜನೆಯದು ತಿಳಿ
ಹಳ್ಳಿ ಪ್ರದೇಶವಿದೆಂಬ ಸೂಚನೆಯಿದೆಯಲ್ಲಿ
ಪ್ರತಿ ಬಣ್ಣದಲ್ಲೂ ಅಡಗಿದೆ ಒಂದೊಂದು ಸೂಚನೆ
ಮೈಲಿಗಲ್ಲುಗಳು ಕಿಲೋ ಮೀಟರ್ ತೋರಿಸಲಲ್ಲ
ಅರಿಯಿರಿ ಮೈಲುಗಲ್ಲುಗಳ ವಿವರವನ್ನು ನೀವೆಲ್ಲ
ಪಂಕಜಾ ಕೆ
[28/01, 8:18 PM] pankajarambhat: ಚುಟುಕು ( ಸ್ಪರ್ಧೆಗಾಗಿ)
ಹಸಿರು ಕಾಡಿನ ಮದ್ಯೆ ಸಾಗುತಿದೆ ರಸ್ತೆ ದಾರಿ
ಅಂಕು ಡೊಂಕಾಗಿದ್ದರೂ ಸೇರುವುದು ಗುರಿ
ನೀಲಾಗಸದಲಿ ಬೆಳ್ಳಿ ಮೋಡದ ಸಾಲು
ಗುರಿ ಸೇರಲೆಂದು ಇಟ್ಟಿರುವರು ಮೈಲುಗಲ್ಲು
ಪಂಕಜಾ ಕೆ
[30/01, 8:45 PM] pankajarambhat: ಸಮಯದ ಗೆಳೆಯ
ಗೋಡೆಯ ಮೇಲಿನ ಗಡಿಯಾರ
ಸಮಯವ ತಿಳಿಯಲು ಆಧಾರ
ಟಿಕ್ ಟಿಕ್ ಎನ್ನುತ ತಿರುಗುವ ಮುಳ್ಳು
ನಿಮಿಷವು ಗಂಟೆಗಳಾಗುತ ಬಡಿವುದು ಬೆಲ್ಲು
ಸೆಕೆಂಡ್ ನಿಮಿಷವು ತಾಸುಗಳಾಗಿ
ಉರುಳುವ ದಿನಗಳು ವರ್ಷಗಳಾಗಿ
ವರ್ತಮಾನವು ಭೂತಕೆ ತಿರುಗಿ
ಓಡುವ ಸಮಯವ ಹಿಡಿಯಲುಬಹುದೇ?
ಬಡವ ಬಲ್ಲಿದ ಬೇಧವ ತೋರದೆ
ಹಗಲಿರುಳೆನ್ನದೆ ನೀ ನಡೆವೆ
ಟಿಕ್ ಟಿಕ್ ಎನ್ನುತ ಓಡುತಲಿರುವೆ
ರವಿಯ ನೆರಳಲೇ ನಿ ಚಲಿಸುತಲಿರುವೆ
ಅನುದಿನ ಕಾಯಕ ಮಾಡುತಲಿರುವೆ
ಸಮಯದ ಗೆಳೆಯನೇ ನೀನಾದೆ
ಪಂಕಜಾ.ಕೆ
[31/01, 5:10 PM] pankajarambhat: ನನ್ನ ಸಮಯದ ಗೆಳೆಯ ಕವನವನ್ನು ಅತ್ಯತ್ತಮವೆಂದು ಪರಿಗಣಿಸಿದ ನಿರ್ವಾಹಕರಿಗೆ ಧನ್ಯವಾದಗಳು🙏🙏🙏🙏 ಸಹ ವಿಜೇತಕವಿ ಮನಸುಗಳಿಗೆ ಅಭಿನಂದನೆಗಳು💐💐💐 ನನ್ನ ಕವನ ಓದಿ ಮೆಚ್ಚಿದ ಕವಿ ಬಂಧುಗಳಿಗೆ ಧನ್ಯವಾದಗಳು🙏🙏
[03/02, 8:28 PM] pankajarambhat: ಹನಿಕವನ
ಆಸೆಯ ಬೆಲೂನ್
ಜಾತ್ರೆಯ ಸಾಲಲಿ
ಬಣ್ಣದ ಬೆಲೂನು
ಬಗೆ ಬಗೆ ಆಟದ ಸಾಮಾನು
ಚಿಣ್ಣರ ಮನವನು
ತಣ್ಣಗೆ ಸೆಳೆದು
ಆಸೆಯ ಬಾಣವ ಬಿಟ್ಟಿಹುದು
ಕೊಳ್ಳುವ ಆಶೆಯು
ಮನದಲಿ ಇರಲು
ಅಣ್ಣನ ಕೈಯನು ಜಗ್ಗಿದಳು
ತಂಗಿಗೆ ಬೆಲೂನು
ಕೊಡಿಸಲು ತನಗೆ
ಅಸಾಧ್ಯವೆನುತ ಚಿಮ್ಮಿತು ಅಣ್ಣನ ಕಣ್ಣೀರು
ಪಂಕಜಾ.ಕೆ.
[06/02, 8:49 PM] pankajarambhat: ಸ್ವಾವಲಂಬಿ
ವರುಷವು ತೊಂಬತ್ತು ಆದರೇನು
ಹಂಗಿನಲಿ ಬಾಳಲಾರೆ ಎಂದೆಂದೂ ನಾನು
ಮಾರಾಟ ಮಾಡುತಿರುವೆನು ಹಣ್ಣು ಕಾಯಿಪಲ್ಲೆ
ಸ್ವಾಭಿಮಾನದ ಸಾಕಾರ ಮೂರ್ತಿ ಈ ಅಜ್ಜಿಯಲ್ಲೆ
ಮುಖದಲ್ಲಿ ತುಂಬಿದೆ ಮಾಸದ ಮುಗುಳ್ನಗು
ತರುತಿದೆ ಮನಕೆ ಉತ್ಸ್ನಾಹ ದ ಮೆರುಗು
ಬಗೆ ಬಗೆಯ ಹಣ್ಣು ತರಕಾರಿಗಳು
ಮಾರಾಟವಾದರೆ ಉಳಿದಾಳು ಅವಳು
ಹೊಟ್ಟೆಪಾಡಿಗಾಗಿ ಅವಳ ಕಸರತ್ತು
ತೊಂಬತ್ತು ಆದರೂ ದುಡಿದು ತಿನ್ನುವ ಗತ್ತು
ವಿದ ವಿಧದ ಹಣ್ಣು ತರಕಾರಿಗಳು ತುಂಬಿರುವುದಿಲ್ಲಿ
ಏನುಂಟು ಏನಿಲ್ಲ ಹೇಳು ಈ ಅಜ್ಜಿಯಲ್ಲಿ
ಕಲಿಯಬೇಕು ಇವರಿಂದ ಸ್ವಾಭಿಮಾನದ ಬದುಕು
ಬದುಕಿದರೆ ಇವರಂತೆ ಬದುಕಬೇಕು
ಅಜ್ಜಿಯ ಸ್ವಾಭಿಮಾನ ಇಂದಿನವರಿಗೆ ಮಾದರಿ
ಎಲ್ಲರೂ ಇವರಂತಿದ್ದರೆ ದೇಶ ಆದೀತು ಮಾದರಿ
ಪಂಕಜಾ.ಕೆ
[06/02, 10:18 PM] pankajarambhat: ನನ್ನ ಹನಿಗವನವನ್ನು ಉತ್ತಮವೆಂದು ಪರಿಗಣಿಸಿದ ನಿರ್ವಾಹಕರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏 ಸಹವಿಜೇತ ಕವಿ ಮನಸ್ಸುಗಳಿಗೆ ಅಭಿನಂದನೆಗಳು💐💐💐
[07/02, 8:38 PM] pankajarambhat: ವೃಕ್ಷದ ಅಳಲು( ಹನಿಕವನ)
ಬಿಸಿಲ ತಾಪಕೆ ನೆರಳ ಕೊಟ್ಟೆ
ತಂಪುಗಾಳಿಯ ಬೀಸಿ ಬಿಟ್ಟೆ
ಹಸಿವೆ ಕಳೆಯಲು ಹಣ್ಣು ಕೊಟ್ಟೆ
ಸ್ವಚ್ಛ ಗಾಳಿಯ ನಿನಗೆ ಕೊಟ್ಟೆ
ನನ್ನ ಉಸಿರನು ನಿನಗೆ ಕೊಟ್ಟೆ
ನನ್ನಉಪಕಾರಕ್ಕೆ ನೀನು ಏನು ಕೊಟ್ಟೆ
ಉಪಕಾರವ ಮರೆತ ಕೃತಘ್ನ ನೀನು
ಕಡಿದು ಉರುಳಿಸುವೆ ಏಕೆ ನನ್ನನು
ನಿನ್ನ ಘೋರಿಯ ನೀನೇ ತೋಡುತ
ನನ್ನ ಮೇಲೆಯೇ ಕೊಡಲಿ ಎತ್ತಿದೆ
ಹಸಿರು ವನ ಅಳಿದರೆ ಮನುಕುಲ ನಾಶ
ತಿಳಿದೂ ತಿಳಿದೂ ಮಾಡುವೆಯಲ್ಲ ನಿನ್ನ ನಾಶ
ಅಳುತಿರುವೆ ನಾನು ನನಗಾಗಿಯಲ್ಲ
ನಿನ್ನ ನಾಶವ ಮಾಡುತ್ತಿರುವ ನಿನಗಾಗಿ
ಪಂಕಜಾ.ಕೆ
[07/02, 10:39 PM] pankajarambhat: ನನ್ನ ಕವನವನ್ನು ಉತ್ತಮವೆಂದು ಪರಿಗಣಿಸಿ ಚಿತ್ರ ಕವನ ಬರೆಯಲು ಸ್ಫೂರ್ತಿ ತುಂಬುತ್ತಿರುವ ಬಳಗದ ನಿರ್ವಾಹಕರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏 ಸಹವಿಜೇತ ಕವಿಮನಸುಗಳಿಗೆ ಅಭಿನಂದನೆಗಳು💐💐💐💐
[10/02, 8:53 PM] pankajarambhat: ಹನಿಕವನ
ದತ್ತ ಪದ ಸೀಮಂತ ಶಾಸ್ತ್ರ ಬಸುರಿ ಹೆಂಗಸು
ಬಯಕೆಯ ಬಳ್ಳಿ
ಹೆಣ್ಣಿನ ಜೀವನದ ಸಾರ್ಥಕ ಕ್ಷಣ
ತಾಯಿಯಾಗುವ ಸಂಭ್ರಮದ ಕ್ಷಣ
ಸೀಮಂತ ಶಾಸ್ತ್ರದಲಿ ಬಸುರಿ ಹೆಂಗಸಿನ ಬಯಕೆ
ಉಡಿತುಂಬಿಸುತ ಬಂಧು ಭಾಂಧವರ ಹಾರೈಕೆ
ಬಸುರಿ ಹೆಂಗಸಿನ ಆಶೆಗಳ ಈಡೇರಿಕೆ
ಮುದ್ದಾದ ಮಗುವೊಂದು ಬರುವ ನಿರೀಕ್ಷೆ
ಹೊಸಕನಸು ಚಿಗುರೊಡೆದಿದೆ ಮನದಲಿ
ಕಾತುರ ಆತುರ ತುಂಬಿದೆ ಒಡಲಲಿ
ಪಂಕಜಾ. ಕೆ.
[11/02, 8:39 PM] pankajarambhat: ಚಿತ್ರ ಕವನ ಸ್ಪರ್ಧೆಗಾಗಿ
ದತ್ತ ಪದ....ಅಂಗೈಯಲ್ಲಿ ನಕ್ಷತ್ರ ಹಿಡಿಯುವ ಬಯಕೆ
ಆಶೆ ಒಂದಾಶೆ (ಹನಿ ಕವನ)
ಪಡುಗಡಲಲಿ ಮರೆಯಾದ ರವಿ
ಹರಡಿತು ಎಲ್ಲೆಡೆ ಕತ್ತಲೆಯ ಗವಿ
ಬಾಂದಳವೆಲ್ಲಾ ಮಿನುಗುತಿವೆ ಬೆಳ್ಳಿ ಚುಕ್ಕೆಗಳು
ನಭದ ಸೆರಗಲಿ ಹರಡಿದೆ ಮುತ್ತು ರತ್ನಗಳು
ಚಂದ್ರ ತಾರೆಯರ ಒಡನಾಟಕೆ ಕಾರಿರುಳು ಕರಗಿ
ಭೂರಮೆಯ ಮೈಯೆಲ್ಲಾ ಹಾಲು ಬೆಳದಿಂಗಳು
ಮನದ ತುಂಬಿದೆ ನೂರಾರು ಬಯಕೆ
ಅಂಗೈಯಲ್ಲಿ ನಕ್ಷತ್ರ ಹಿಡಿಯುವ ಬಯಕೆ
ನಕ್ಷತ್ರ ಪುಂಜಗಳು ಚಿತ್ರದಲಿ ಕೈಗೆಟುಕಿದೆ
ಅಂಗೈಯ ತುಂಬೆಲ್ಲಾ ಬಿರಿದರಳಿದೆ
ಪಂಕಜಾ.ಕೆ.
[12/02, 7:01 PM] pankajarambhat: ಅರಿವೆಂಬ ಜ್ಯೋತಿ
ಅಜ್ಞಾನವೆಂಬ ಅಂಧಾಕಾರವ ಕಳೆಯಲು
ಜ್ಞಾನವೆಂಬ ಅರಿವಿನ ಹರಿವು ಇರಲು
ಮನಕೆ ತುಂಬುತಿದೆ ಆನಂದದ ಅಮಲು
ಅಂದಾಕಾರವು ತೊಲಗಿ
ಅರಿವೆಂಬ ಜ್ಯೋತಿ ಬೆಳಗಿ
ಬಾಳು ಬಂಗಾರವಾಗದೆ ಇರದು
ಸಾಹಿತ್ಯಲೋಕದಲಿ ಜ್ಞಾನದ ಹಸಿವು
ಬಗೆ ಬಗೆ ಸಾಹಿತ್ಯದ ರಸದೌತಣದ ಹರಿವು
ಸಾಹಿತಿಯ ಮನದಾಳದ ಅರಿವಿನ ಹರಿವು
ಪುಸ್ತಕದಲಿಹೊಳೆಯಾಗಿ ಹರಿದಿದೆ
ಹರಿದಷ್ಟೂ ಚಿಮ್ಮುತ್ತಿದೆ ಜ್ಞಾನದ ಸಾಗರ
ಬತ್ತದಾ ತೊರೆಯಂತೆ ಜ್ಞಾನದ ಭಂಡಾರ
ಮೊಗೆ ಮೊಗೆದು ಧನ್ಯಳಾಗುವ ಬಾವ
ನೋವು ದುಃಖಗಳ ಮರೆಸುತಿದೆ ಜ್ಞಾನದ ಹಸಿವು
ಮನಕೆ ರಸದೌತಣವ ಉಣಬಡಿಸುತಿದೆ ಸಾಹಿತ್ಯದ ಘಮಲು
ಪಂಕಜಾ.ಕೆ.
[13/02, 7:47 PM] pankajarambhat: ಚಿತ್ರ ಕವನ
ಮಕ್ಕಳಾಟ
ಬೇಸಿಗೆ ರಜೆಯಲಿ
ಮಕ್ಕಳ ಆಟ
ಮನಸಿಗೆ ಖುಷಿಯನು ತರುತಿಹುದು
ನೀರಲಿ ಜಿಗಿದು
ಮರದಲಿ ಕುಣಿದು
ಆಟವ ಆಡುತ ಕುಣಿಯುವರು
ಮರಗಳ ಏರುತ
ಕೊಳದಲಿ ಈಜುತ
ಖುಷಿಯಲಿ ದಿನವನು ಕಳೆಯುವರು
ಹೊಳೆದಂಡೆಯ
ಮರವನು ಹತ್ತಿ
ಮರಕೋತಿ ಆಟವ ಆಡುತ ನಲಿಯುವರು
ಏನಿದು ಆಟ
ಎಂತಹ ನೋಟ
ದಣಿವೇ ಇಲ್ಲದೆ ಆಡುವರು
ಇಂದಿನ ಮಕ್ಕಳಿಗೆ
ಟಿವಿಷನ್ ಕಾಟ
ಆಟಕೆ ಬಿಡುವೇ ಇರದಲ್ಲ
ಆಟವ ಆಡುವ
ಮೋಜಿನ ದಿನಗಳು
ಬಾಲ್ಯದ ಆ ದಿನಗಳು ಇನ್ನೆಲ್ಲಿ
ಪಂಕಜಾ.ಕೆ.
[13/02, 9:34 PM] +91 99455 51423: 12- 02-2020 ರ ಚಿತ್ರಕ್ಕೊಂದು ಕವನ ಸ್ಪರ್ಧೆಯ ಫಲಿತಾಂಶ :
ಅತ್ಯುತ್ತಮ ಕವನ ಬರೆದವರು
೧)ಬಸವರಾಜ ಕುಂಬಾರ ಬಾಗಲಕೋಟೆ🏆
೨)ಕುಸುಮ್ ಸಾಲಿಯಾನ್,🏆
೩)ಅನುರಾಧ ಶಿವಪ್ರಕಾಶ್🏆
ಉತ್ತಮ ಕವನ ಬರೆದವರು
೧)ಹರಿನರಸಿಂಹ🥇 ಉಪಾಧ್ಯಾಯ🥇
೨)ಪಂಕಜ. ಕೆ 🥇
ಹನಿಗವನ
೧)ಮಕರಂದ ಮನೋಜ,🥈
೨)ಸುಮನ್ ರಾವ್🥈
೩)ದಿಲೀಪ್ ಹೆಗಡೆ,🥈
೪)ಸಂದೇಶ್ ಬೊಮ್ಲಾಪುರ🥈
ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದೆ.
ಭಾಗವಹಿಸುವಿಕೆ ಮುಖ್ಯ. ಯಾರೂ ಬೇಸರ
ಮಾಡಿಕೊಳ್ಳಬಾರದು. ಬರೆಯುತ್ತಲೇ ಇರಿ.
ಧನ್ಯವಾದಗಳು💐
ನವಪರ್ವ ಫೌಂಡೇಶನ್ (ರಿ.) ಅಡ್ಮಿನ್ ಬಳಗ
[13/02, 9:49 PM] pankajarambhat: ನನ್ನ ಕವನವನ್ನು ಉತ್ತಮ ಎಂದು ಪರಿಗಣಿಸಿದ ಬಳಗದ ಅಡ್ಮಿನ್ ರವರಿಗೆ ಧನ್ಯವಾದಗಳು 🙏🙏 ಸಹವಿಜೇತರಿಗೆ ಅಭಿನಂದನೆಗಳು💐💐
[14/02, 8:33 PM] pankajarambhat: ಪ್ರೀತಿ ಯ ಕಾವ್ಯ( ಚಿತ್ರ ಕವನ)
ಕೊಳಲು ಹಿಡಿದ ನಿನ್ನ ಕೈಯು
ನನ್ನ ಕೈಯ ಬೆಸೆದಿದೆ
ಮನದ ತುಂಬಾ ಪ್ರೇಮದಲೆಯ
ಬಾವವನ್ನು ತಂದಿದೆ
ಕಣ್ಣು ತುಂಬಾ ನಿನ್ನ ರೂಪ
ತುಂಬಿ ನಿಂತು ಕಾಡಿದೆ
ನಿನ್ನ ಕಣ್ಣ ಸೆಳೆತದಲ್ಲಿ ನನ್ನ
ಮನವು ಸಿಕ್ಕಿ ನರಳಿದೆ
ಕಳ್ಳ ಕೃಷ್ಣ ಹೇಗೆ ಬಂದು
ಮನಕೆ ಲಗ್ಗೆ ಇಟ್ಟೆಯೊ
ಪ್ರೀತಿ ಎನ್ನುವ ಕಾವ್ಯವನ್ನು
ಎಂದು ನೀನು ಬರೆದೆಯೋ
ಒಲಿದ ಜೀವ ಜತೆಗೆ ಇರಲು
ಬಾಳು ಎಷ್ಟು ಸುಂದರ
ಪ್ರೀತಿಯಿಂದ ಕೈ ಯ ಹಿಡಿದು
ನಡೆವುದೆಷ್ಟು ಬಂಧುರ
ನಮ್ಮ ಪ್ರೀತಿ ಜಗವ ಗೆದ್ದು
ಮೋಡಿಯನ್ನು ಮಾಡಿದೆ
ಪ್ರೀತಿಗಿಲ್ಲ ಎಂದೂ ಸಾವು
ಎನುತ ಸಾರಿ ಹೇಳಿದೆ
ಪಂಕಜಾ. ಕೆ
[15/02, 7:23 AM] +91 99455 51423: ಕವನ
13- 02-2020 ರ ಚಿತ್ರಕ್ಕೊಂದು ಕವನ ಸ್ಪರ್ಧೆಯ ಫಲಿತಾಂಶ :
ಅತ್ಯುತ್ತಮ ಕವನ ಬರೆದವರು
೧)ದಿಲೀಪ್ ಹೆಗಡೆ 🏆
೨)ದೇವರಾಜ್ ನಿಸರ್ಗತನಯ🏆
೩)ಎಚ್ ಭೀಮರಾವ್ ವಾಷ್ಠರ್🏆
ಉತ್ತಮವಾಗಿ ಬರೆದವರು
೧)ನಿವೇದಿತಾ ಮಂಗಳೂರು 🥇
೨)ಆಶಾ ರಾಣಿ 🥇
೩)ಮೊಗೇರಿ ಶೇಖರ ದೇವಾಡಿಗ 🥇
೪)ಜಯಲಕ್ಷ್ಮಿ ಕೆ🥇
ಹನಿಗವನ ವಿಭಾಗದಲ್ಲಿ
ಅತ್ಯುತ್ತಮ
೧(ಪೀರ್ ಸಾಹೇಬ್ ಬೀರಬ್ಬಿ 🏆
೨)ರಮೇಶ್ ಕುಲಾಲ್ 🏆
ಉತ್ತಮ
೧)ಅನನ್ಯ ಗೀತಾ🥇
೨)ಜ್ಯೋತಿ ಬಾಳಿಗಾ🥇
ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದೆ.
ಭಾಗವಹಿಸುವಿಕೆ ಮುಖ್ಯ. ಯಾರೂ ಬೇಸರ
ಮಾಡಿಕೊಳ್ಳಬಾರದು. ಬರೆಯುತ್ತಲೇ ಇರಿ.
ಧನ್ಯವಾದಗಳು💐
ನವಪರ್ವ ಫೌಂಡೇಶನ್ (ರಿ.) ಅಡ್ಮಿನ್ ಬಳಗ
[15/02, 4:36 PM] +91 99455 51423: 14-02-2020 ರಂದು ನಡೆದ ಚಿತ್ರಕ್ಕೊಂದು
ಸ್ಪರ್ಧೆಯ ಫಲಿತಾಂಶ
ಕವನ
ಅತ್ಯುತ್ತಮವಾಗಿ ಬರೆದವರು
೧)ಮಹೇಶ್ ಹೆಗಡೆ 🏆
೨)ಲತಾ ಬನಾರಿ 🏆
೩)ನಾಗರತ್ನಾತ್ಮಜೆ 🏆
ಉತ್ತಮವಾಗಿ ಬರೆದವರು
೧)ಶ್ರುತಿ. ಎಂ ಡಿ 🥇
೨)ಶಕುಂತಲಾ 🥇
೩)ಪಂಕಜ ಕೆ 🥇
೪)ಮಾನಸ ಪ್ರವೀಣ 🥇
೫)ಹರೀಶ್ ಕಜೆ 🥇
ಹನಿಗವನ ವಿಭಾಗ
೧)ವಿನಂತಿ ಮಂಜುನಾಥ್ 🥇
೨)ಉಷಾ ದಿನೇಶ್ 🥇
೩)ಹುಳಿಯಾರ್ ಷಬ್ಬೀರ್🥇
ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದೆ.
ಭಾಗವಹಿಸುವಿಕೆ ಮುಖ್ಯ. ಯಾರೂ ಬೇಸರ
ಮಾಡಿಕೊಳ್ಳಬಾರದು. ಬರೆಯುತ್ತಲೇ ಇರಿ.
ಧನ್ಯವಾದಗಳು💐
ನವಪರ್ವ ಫೌಂಡೇಶನ್ (ರಿ.) ಅಡ್ಮಿನ್ ಬಳಗ
[17/02, 8:32 PM] pankajarambhat: ಚೆಲುವ ಕೃಷ್ಣ
ಚೆಲುವ ಮುಖದ
ಮುದ್ದು ಕೃಷ್ಣ
ಮನವ ಕದ್ದ ಬಾಲನೆ
ಕೈಯಲೊಂದು
ಕೊಳಲು ಹಿಡಿದು
ನಗುತಲಿರುವ ಚೆಲುವನೆ
ಬಣ್ಣ ಬಣ್ಣದ
ಅಂಗಿ ತೊಟ್ಟು
ಮುಗ್ಧ ನಗೆಯ ಬೀರಿದೆ
ನವಿಲುಗರಿಯು
ಶಿರದಲಿದ್ದರೆ
ನೀನು ಬಾಲಕೃಷ್ಣೆನೆ
ಬೆಣ್ಣೆ ಕದ್ದು
ಮಣ್ಣು ತಿಂದು
ಜಗವ ಬಾಯಲಿ ತೋರಿದೆ
ಕೊಳಲ ನುಡಿಸಿ
ರಾಧಯೊಲವ
ಪಡೆದುಕೊಂಡ ಧೀರನೆ
ದುಷ್ಟರನ್ನು ಶಿಕ್ಷಿಸುತ್ತ
ಶಿಷ್ಟರನ್ನು ರಕ್ಷಿಸುತ್ತ
ಜಗದ ತಂದೆ ಎನಿಸಿದೆ
ಪಂಕಜಾ.ಕೆ
[18/02, 9:34 PM] pankajarambhat: ಪ್ರೇಮದೋಲೆ
ಕಿವಿಯ ಓಲೆ ಕಂಡು
ನನ್ನ ಮನವು
ಹಿಗ್ಗಿ ನಲಿಯಿತು
ಇನಿಯಕೊಟ್ಟ
ಪ್ರೀತಿಯಿಂದ
ಮುತ್ತಿನೋಲೆಯಲ್ಲವೇ
ಕೆನ್ನೆ ಮೇಲೆ
ಅದರ ಸ್ಪರ್ಶ
ಕಚಗುಳಿಯ ಇಡುತಿದೆ
ಅದರ ಸೊಬಗ
ಕಂಡು ಮನವು
ಖುಷಿಯ ಕಡಲು ಆಗಿದೆ
ಇನಿಯ ಕೊಟ್ಟ
ಒಲವಿನೋಲೆ
ಪ್ರೀತಿ ಉಕ್ಕಿ ಹರಿದಿದೆ
ಸವಿ ಸವಿ
ನೆನಪುಗಳು
ಮನಕೆ ಲಗ್ಗೆ ಇಟ್ಟಿದೆ
ಬೇಗ ಬಾರೋ
ಇನಿಯಾ ನೋಡು
ಒಮ್ಮೆ ನನ್ನ ರೂಪವ
ಕಿವಿಯೋಲೆ ಇಟ್ಟ
ನನ್ನ ಸೊಬಗು
ಹೆಚ್ಚಿದೆಯಲ್ಲವೇ
ಒಮ್ಮೆ ನೀನು
ತುಂಟತನದಿ
ಉಸುರಿ ಬಿಡುವೆಯಲ್ಲವೇ
ಪಂಕಜಾ.ಕೆ
[19/02, 7:20 PM] pankajarambhat: ಮುಸ್ಸಂಜೆ (ಹನಿ ಕವನ)
ಗೋಧೂಳಿಯ ಈ ಸಮಯದಲಿ
ಸೂರ್ಯನು ಮುಳುಗಿದ ಪಡುವಣದಲಿ
ಬಾನಲಿ ಹರಡಿತು ಚೆಲುವಿನ ಬಣ್ಣ
ಸೆಳೆಯಿತು ರಸಿಕರ ಮನಸಿನ ಕಣ್ಣ
ಹಗಲಲಿ ಮಿಂಚಿದ ಬಾನಿನ ರಾಜ
ನಿಶೆಯೊಡನಾಡಲು ತೆರಳಿದ ರವಿತೇಜ
ರಾತ್ರಿಯ ರಾಣಿಯು ದಳಗಳ ಅರಳಿಸಿ
ತನ್ನಯ ಸುಗಂಧವ ಎಲ್ಲೆಡೆ ಪಸರಿಸಿತು
ತಂಪಿನ ಗಾಳಿಯು ಸೊಂಪಿಲಿ ಬೀಸಿ
ಬಿಸಿಲಿನ ಬೇಗೆಯ ನೀಗಿಸಿತು
ಅರಳುವ ಹೂಗಳ ಘಮಲು
ಮೈಮನಕೆಲ್ಲಾ ತುಂಬಿತು ಅಮಲು
ಪಂಕಜಾ.ಕೆ
[20/02, 9:22 PM] pankajarambhat: ಬಣ್ಣದ ಬುಟ್ಟಿ
ಬಣ್ಣ ಬಣ್ಣದ ಬುಟ್ಟಿಗಳು
ಕೈಚಳಕದಿ ಹೆಣೆದ ತಟ್ಟೆಗಳು
ಬಿದಿರ ಬುಟ್ಟಿಗಳಿದ್ದವು ಆಗ
ಪ್ಲಾಸ್ಟಿಕ್ ಬುಟ್ಟಿಗಳೇ ಈಗ
ಕಾಡು ಗುಡ್ಡಗಳೆಲ್ಲ ಕಡಿದಿಹರು
ಬುಟ್ಟಿಹೆಣೆಯಲು ಬಿದಿರು ಎಲ್ಲಿಹುದು
ಹೊಟ್ಟೆಪಾಡಿಗಾಗಿ ಬೇಕಿದೆ ಕಸುಬು
ಮಾರಾಟಕ್ಕಾಗಿ ಸಂತೆಯಲಿ ಹರಡಿಹನು
ಮಾರಾಟವಾದರೆ ಹೊಟ್ಟೆಪಾಡು
ಇಲ್ಲದಿದ್ದರೆ ಬಾಳು ನಾಯಿಪಾಡು
ಪಂಕಜಾ.ಕೆ.
[20/02, 10:08 PM] +91 99455 51423: 19-02-2020 ರಂದು ನಡೆದ ಚಿತ್ರಕ್ಕೊಂದು
ಸ್ಪರ್ಧೆಯ ಫಲಿತಾಂಶ
ಕವನ ವಿಭಾಗ
ಅತ್ಯುತ್ತಮವಾಗಿ ಬರೆದವರು
೧)ಆಶಾಮಯ್ಯ🏆
೨)ಕುಸುಮ ಸಾಲಿಯಾನ್🏆
೩)ಉಷಾ ದಿನೇಶ್ 🏆
*ಉತ್ತಮವಾಗಿ ಬರೆದವರು*
೧)ಮಹೇಶ್ ಹೆಗಡೆ🥇
೨)ನಂಜುಂಡ ಸ್ವಾಮಿ ಚೌಡ್ಲಪುರ🥇
೩) ಜ್ಯೋತಿ ಬಾಳಿಗ🥇
*ಹನಿಗವನಗಳು*
೧)ಮಹಾಂತೇಶ್ ಮಾಗನೂರು🥈
೨)ಅನುರಾಧ ಶಿವಪ್ರಕಾಶ್ 🥈
೩)ಮಕರಂದ ಮನೋಜ್
ಕೆ. ಪಂಕಜಾ🥈
ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದೆ.
ಭಾಗವಹಿಸುವಿಕೆ ಮುಖ್ಯ. ಯಾರೂ ಬೇಸರ
ಮಾಡಿಕೊಳ್ಳಬಾರದು. ಬರೆಯುತ್ತಲೇ ಇರಿ.
ಧನ್ಯವಾದಗಳು💐
ನವಪರ್ವ ಫೌಂಡೇಶನ್ (ರಿ.) ಅಡ್ಮಿನ್ ಬಳಗ
*
[20/02, 10:16 PM] pankajarambhat: ನನ್ನ ಹನಿ ಕವನವನ್ನು ಉತ್ತಮವೆಂದು ಆಯ್ಕೆ ಮಾಡಿದ ಬಳಗದ ಅಡ್ಮಿನ್ ರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏ಸಹವಿಜೇತ ಕವಿಮನಸುಗಳಿಗೆ ಅಭಿನಂದನೆಗಳು💐💐💐💐
[24/02, 9:22 PM] pankajarambhat: ಸ್ಪರ್ಧೆಗಾಗಿ
ಮುದ ತಂದ ಮಳೆ
ಬೇಸಿಗೆಯ ಬಿರು ಬಿಸಿಲಿಗೆ
ತನು ಕಾದು ಬಸವಳಿದು
ಮಳೆಯ ಹನಿಗಾಗಿ ಕಾತರಿಸಿದೆ
ತಂಪಾದ ಗಾಳಿಯು
ಸೊಂಪಾಗಿ ಬೀಸಲು
ಮುಂಗಾರು ಮಳೆ ಸುರಿದು ಮನವರಳಿತು
ಬೆಂಗಾಡಿನಂತಿದ್ದ ಮನದಲ್ಲಿ
ಹೊಸಕನಸ ಚಿಗುರಿಸುತ
ಮಳೆ ಸುರಿದು ಮನವಿಂದು ಕುಣಿದಾಡಿತು
ಪಂಕಜಾ.ಕೆ
[25/02, 8:29 PM] pankajarambhat: ಸ್ಪರ್ಧೆಗಾಗಿ
ಬರಹಗಾರರು (ಹನಿಕವನ)
ಬರಹಗಾರರು ಇವರು
ಸರಸ್ವತಿಯ ವರಪುತ್ರರು
ಲೇಖನಿಯ ಹಿಡಿದು ಬರೆಯುವರು
ಲೋಕದ ಅಂಕು ಡೊಂಕು
ಬರಹವೇ ಇವರ ಉಸಿರು
ಮನದಾಳದ ಮಾತುಗಳೆಲ್ಲಾ
ಹೊಮ್ಮುವುದು ಮುತ್ತಿನ ಅಕ್ಷರಗಳಾಗಿ
ಸಿಡಿಯುವುದು ಮದ್ದುಗುಂಡುಗಳಾಗಿ
ಬರಹಗಾರರೆಂದರೆ ಬಿಕ್ಷುಕರಲ್ಲ
ಲೇಖನಿಯ ಹಿಡಿದರೆ ಅವರ ಸಮಾನರಿಲ್ಲ
ಖಡ್ಕ ಕ್ಕಿಂತ ಹರಿತವಾಗಿದೆ ಬರಹ
ಬೆಚ್ಚುವನು ಅಪರಾಧಿ ಇದರಿಂದ
ಜ್ಞಾನದಾ ಗಣಿ ಇವರು
ಸಾಹಿತ್ಯದ ರಸಧಾರೆ ಹರಿಸಿ
ಸಮಾಜದ ಕಣ್ಣು ತೆರೆಸುವರು
ಯಾರಲ್ಲೂ ಕೈ ಚಾಚದ ಸ್ವಾಭೀಮಾನಿಗಳು
ಪಂಕಜಾ.ಕೆ
[25/02, 9:34 PM] ತುಳಸಿ ನವಪರ್ವ ಫೌಂಡೇಷನ್: *ನಿನ್ನೆಯ ಫಲಿತಾಂಶ:- ೨೪-೦೨-೨೦೨೦*
ಮಳೆ ಮನ ಎನ್ನುವೆರಡು ಪದಗಳು ಭಾವನೆಗೆ ಸಂಬಂಧಿಸಿದ್ದು. ಎಲ್ಲರ ಭಾವನೆಗಳು ನವಿರಾಗಿ ಮೂಡಿಬಂದಿದೆ. ವಾವ್..!! ಸೂಪರ್..!! ಅದ್ಭುತ..!! ಚೆನ್ನಾಗಿದೆ. ಎನ್ನುವಂತಹ ಉದ್ಗಾರಗಳನ್ನು ಓದುಗನಲ್ಲಿ ಮೂಡಿಸುತ್ತದೆ.
📚✍️📚✍️📚✍️✍️📚✍️📚✍️📚✍️📚✍️📚✍️📚✍️📚
✍️ *ಅತ್ಯುತ್ತಮ ಹನಿಗವನಗಳು* ✍️
✒️ ಪಂಕಜಾ .ಕೆ 🏅
✒️ಲಿಂಗೇಶ್ ಎಚ್. ಬಿದರಕುಂದಿ 🏅
✒️ ನಿವೇದಿತಾ ಮಂಗಳೂರು 🏅
*ಮೊದಲ ಉತ್ತಮವಾದ ಹನಿಗವನಗಳು*
📌 ಪೀರ್ ಸಾಹೇಬ್ ಬೀರಬ್ಬಿ 🏅
📌ಲತಾ ಬನಾರಿ 🥇
📌 ಜಯಲಕ್ಷ್ಮೀ ಎಂ 🥇
📌ತೇಜಾವತಿ ಎಚ್ ಡಿ 🥇
📌ವಿನಂತಿ ಮಂಜುನಾಥ್ 🥇
📌 ಶ್ರೀಕಾಂತ್ ಸುಗಂಧಿ 🥇
*ದ್ವಿತೀಯ ಉತ್ತಮ ಹನಿಗವನಗಳು*
📌ಹರಿನರಸಿಂಹ ಉಪಾಧ್ಯಾಯ🥈
📌ಚಕ್ಡಿ 🥈
📌 ಶಕುಂತಲಾ ಎಫ್ ಕೆ.🥈
📌 ರೇಶ್ಮಾ ಗುಳೇದಗುಡ್ಡಾಕರ್🥈
📌 ಎಚ್. ಭೀಮರಾವ್ ವಾಷ್ಠರ್🥈
*ತೃತೀಯ ಉತ್ತಮ ಹನಿಗವನಗಳು*
📌 ಜ್ಯೋತಿ ಬಾಳಿಗಾ 🥉
📌 ಉಷಾ ದಿನೇಶ್ 🥉
📌 ಕುಸುಮ್ ಸಾಲಿಯಾನ್ 🥉
📌 ಸ್ನೇಹಾ 🥉
*- ಚುಟುಕು ವಿಭಾಗ -*
📌 ಮಹಾಂತೇಶ ಮಾಗನೂರ 🏅
📌 ದಿಲೀಪ್ ಹೆಗಡೆ🏅
📌ವೆಂಕಟೇಶ ಚಾಗಿ🏅
📌 ಮಂಜುನಾಥ್ ಕೆ ಶಿವಪುರ🏅
📌ಸುಮ ಉಮೇಶ್ 🏅
📌 ಶ್ರಾವಣ ಗಂಗಾ 🏅
📌 ಮಧುಕೇಶವ ಭಾಗ್ವತ್ 🏅
📌 ಸುಜಾತ ರವೀಶ್ 🏅
📌 ರಮೇಶ್ ಕುಲಾಲ್ 🏅
📌 ಅಮೃತಾ ಎಂ ಡಿ🏅
📌 ಅನುರಾಧಾ ಶಿವಪ್ರಕಾಶ್ 🏅
ಎಲ್ಲರೂ ತುಂಬಾ ಚೆನ್ನಾಗಿ ಬರೆದಿದ್ದೀರ.
ಕೆಲವರದು ಸರಿಯಾಗಲಿಲ್ಲ.
ಶುಭಹಾರೈಕೆಗಳು💐
ನಾಳೆ ಈ ರೀತಿ ಆಯ್ಕೆ ಇರುವುದಿಲ್ಲ.
😄😄 ಇವತ್ತು ಮಾತ್ರ ವಿಶೇಷ.😃😃
ಶುಭರಾತ್ರಿ🌝
[25/02, 9:45 PM] +91 83018 60294: ಮೊದಲ ಉತ್ತಮ ಹನಿಯಲ್ಲಿ ನನ್ನ ಹನಿಗವನ ಆಯ್ಕೆ ಮಾಡಿದ ನಿರ್ಣಾಯಕರಿಗೆ ಧನ್ಯವಾದಗಳು. ಎಲ್ಲಾ ವಿಜೇತರಿಗೆ ಅಭಿನಂದನೆಗಳು
[25/02, 10:34 PM] pankajarambhat: ನನ್ನ ಹನಿಕವನವನ್ನು ಅತ್ಯುತ್ತಮವೆಂದು ಪರಿಗಣಿಸಿದ ಬಳಗದ ನಿರ್ವಾಹಕರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏 ಸಹವಿಜೇತ ಕವಿಮನಸುಗಳಿಗೆ ಅಭಿನಂದನೆಗಳು💐💐💐
[26/02, 2:34 PM] +91 99455 51423: *ನಿನ್ನೆಯ ಫಲಿತಾಂಶ:- ೨೫-೦೨-೨೦೨೦*
ಬರಹಗಾರರು ಭಿಕ್ಷುಕರಲ್ಲ
📚✍️📚✍️📚✍️✍️📚✍️📚✍️📚✍️📚✍️📚✍️📚✍️📚
✍️ *ಅತ್ಯುತ್ತಮ ಕವನಗಳು* ✍️
✒️ ಮಹೇಶ್ ಹೆಗಡೆ 🏅
✒️ ಮಂಜುನಾಥ ಕೆ ಶಿವಪುರ 🏅
✒️ ತಿಪ್ಪೇಸ್ವಾಮಿ ಚಕ್ಡಿ 🏅
* ಉತ್ತಮವಾದ ಕವನಗಳು*
📌 ಆಶಾ ಮಯ್ಯ 🥈
📌 ಲಕುಮಿಕಂದ ಮುಕುಂದ 🥈
📌 ಕುಸುಮ್ ಸಾಲಿಯಾನ್🥈
📌 ಕವಿತಾ ಸಾರಂಗಮಠ🥈
📌 ಅಮುಭಾವಜೀವಿ🥈 ಮಸ್ಟೂರ್.
ಶುಭಹಾರೈಕೆಗಳು
[27/02, 6:29 PM] pankajarambhat: ಮೊರೆ
ವೆಂಕಟರಮಣನೆ ಸಂಕಟಹರಣನೆ
ಮೋದದಿ ನಿನ್ನನು ಭಜಿಸುವೆನು
ಸರಸಿಜನೇತ್ರನೇ ಲಕ್ಷ್ಮೀರಮಣನೆ
ಅನುದಿನ ನಿನ್ನನು ನೆನೆಯುವೆನು
ಸಪ್ತಗಿರಿವಾಸನೆ ಶ್ರೀ ವೆಂಕಟೇಶನೆ
ಭವಬಂಧನದೊಳು ಸಿಲುಕಿರುವೆನು
ಶೇಷಶಯನನೆ ತಿರುಪತಿ ಗಿರಿವಾಸನೆ
ಕರಮುಗಿದು ನಿನ್ನನು ಬೇಡುವೆನು
ಜಲಜನಾಭನೆ ಪದ್ಮ ಪಾಣಿಯೇ
ತರಳೆಯ ಮೊರೆಯನು ಆಲಿಸೆಯ
ಅನುದಿನ ನಿನ್ನಯ ಸೇವೆಯ ಕರುಣಿಸಿ
ಮುಕ್ತಿಯ ನೀಡೋ ಲಕ್ಷ್ಮೀಶ
ಕರಗಳ ಮುಗಿಯುತ ಶಿರವನು ಬಾಗುತ
ಅನುದಿನ ನಿನಗೆ ಪೊಡಮಡುವೆ
ಮೊರೆಯನು ಆಲಿಸಿ ಪ್ರೇಮದಿ ಬಂದು
ನನ್ನನು ಕಾಯೋ ಗೋವಿಂದ
ಪಂಕಜಾ.ಕೆ. ಮುಡಿಪು
[28/02, 6:15 PM] ತುಳಸಿ ನವಪರ್ವ ಫೌಂಡೇಷನ್: *ನಿನ್ನೆಯ ಭಕ್ತಿಗೀತೆ ಸ್ಪರ್ಧೆಯ ಫಲಿತಾಂಶ ೨೮-೦೨-೨೦೨೦*
ಅತ್ಯುತ್ತಮವಾಗಿ ಬರೆದವರು
📌ಕುಸುಮ ಸಾಲಿಯಾನ್🏅
📌ವಿನಂತಿ ಮಂಜುನಾಥ 🏅
📌ಮಕರಂದ 🏅
🧸ಉತ್ತಮವಾಗಿ ಬರೆದವರು🧸
📌ಚಕ್ಡಿ🥇
📌ಸುಜಾತ ರವೀಶ್🥇
📌ಲತಾ ಬನಾರಿ🥇
*ಹನಿ ಭಕ್ತಿಗೀತೆ ಬರೆದವರು*
📌ಪೀರ್ ಸಾಹೇಬ್🥈
📌ಅನಿತ ಪಿ. ಕೆ🥈
📌ರಾಜು ರಾಮದುರ್ಗ🥈
📌ಚಂದ್ರಿಕಾ ಆರ್ ಬಾಯಿರಿ🥈
*ಶುಭವಾಗಲಿ💐*
*ನವಪರ್ವ ಫೌಂಡೇಶನ್ (ರಿ)*
Comments
Post a Comment