Skip to main content

ಸೋಷಿಯಲ್ ಮೀಡಿಯಾ

ಸೋಷಿಯಲ್ ಮೀಡಿಯಾ.   (ವಿಜಯವಾಣಿ ದೀಪಾವಳಿ ವಿಶೇಷಾಂಕ2018)

ರವಿಯು ಉದಯಿಸುವ ಮದಲೇ
ಮೊಬೈಲ್ ನೋಡುವ ಕಾಲವಿದು
ಮೊಬೈಲ್ ಇಲ್ಲದೆ ಒಂದು ಕ್ಷಣವೂ
ಕಳೆಯಲಾರದ  ದಿನಗಳಿದು

ಫೇಸ್ ಬುಕ್ ಟ್ವಿಟ್ಟರ್ ವಾಟ್ಸಪ್
ಇನ್ಸ್ಟಾಗ್ರಾಮ್  ಎಲ್ಲೆಡೆ ಈಗ ಜನಪ್ರಿಯ
ಬೆಸೆದಿದೆ   ಇವುಗಳು ಇಂದು
ಪ್ರಪಂಚದೆಲ್ಲೆಡೆಯ ಜನರನು
ನೀರು ಕುಡಿದಂತೆ ಸಂಪರ್ಕವು ಸರಾಗವೀಗ

ದೂರದ ಪ್ರಪಂಚವ ಹತ್ತಿರ ತಂದು
ಒಬ್ಬರಿನ್ನೊಬ್ಬರ ಚಂದಕೆ  ಬಿಗಿದು
ಎಲ್ಲರ ಎಲ್ಲವ ತೋರುವ ಪುಟವು
ಮುಖಪುಟವೆಂಬ ಹೊತ್ತಿಗೆಯು

ಸೋಷಿಯಲ್ ಮೀಡಿಯಾ ಇದ್ದರೆ
ಜಗತ್ತೇ ಇರುವುದು ಕೈ ಬೆರಳ ತುದಿಯಲ್ಲಿ
ಗೂಗಲ್ ಮ್ಯಾಪ್ ಇದ್ದರೆ  ಸಾಕು
ಎಲ್ಲಿಗೆ ಬೇಕಾದರೂ ಹೋಗಲು  ಭಯವಿಲ್ಲ

ಗೂಗಲ್ಎಂಬಾ ಅಜ್ಜನು ತಿಳಿಸುವ
ಹೊಸ ಹೊಸ ವಿಷಯಗಳ ಕಂತೆಯನು
ಜ್ಞಾನದ ವೃದ್ಧಿಗೆ ಸಾಧನವೀತ
ಉಪಯೋಗಿಸಿದರೆ ಸರಿಯಾಗಿ

ಸೋಷಿಯಲ್  ಮೀಡಿಯಾ
ಜನಜೀವನದ ಅವಿಭಾಜ್ಯ
ಅಂಗವೇ ಆಗಿದೆ  ಈಗ
ಕ್ಷಣಮಾತ್ರದಲ್ಲಿ ಪ್ರಪಂಚದೆಲ್ಲರ ಸಂಪರ್ಕ

ದೂರದ ಮಿತ್ರರು ಹತ್ತಿರವಾಗಿ
ಸುತ್ತಲಪ್ರಪಂಚನೆರೆಮನೆಯಾಗಿ
ಸಂಸ್ಕೃತಿಭಾಷೆಯಸೇತುವೆಯಾಗಿ
ಕೊಡುತಿದೆ ಮನಕೆ ಉಲ್ಲಾಸ

ಕೈ ಬೆರಳ ತುದಿಯಲೆ ಎಲ್ಲವೂ ಆಗಿ
ಜಗತ್ತಿನ ಸುದ್ದಿಯ ಕ್ಷಣದಲಿ ತಿಳಿವ
ವಾಟ್ಸಪ್ ಅಣ್ಣನ ಮೋಹವ ಬಿಟ್ಟವರುಂಟೆ
ವಾಟ್ಸಪ್ ಇದ್ದರೆ ಸಮಯವು
ಕಳೆಯುವುದು ತಿಳಿಯುವುದೇ ಇಲ್ಲ

ಪ್ರತಿಯೊಂದರಲ್ಲೂ ಒಳಿತಿನ
ಜತೆಗೆ ಕೆಡುಕು ಇರುವ ತೆರದಲಿ
ಸೋಷಿಯಲ್ ಮೀಡಿಯಾ ದ ಅತಿ ಬಳಕೆ ತರುವುದುಮನಸಿಗೆ ಖಿನ್ನತೆ

ಸೋಷಿಯಲ್ ಮೀಡಿಯಾ ದಲ್ಲಿ
ವಿಹರಿಸುತ್ತ  ಮುಖಾಮುಖಿ
ಮಾತನು ಮರೆಯುವರು
ಫೇಸ್ ಬುಕ್ ಸ್ನೇಹಿತರಜತೆಯಲಿ ಸೇರುತ
ಮನೆಯವರೊಡನಾಟವಮರೆಯುವರು

ಅತಿಯಾದರೆ ಅಮೃತವೂ ವಿಷ
ಸೋಷಿಯಲ್ ಮೀಡಿಯಾ ಗೀಳಾದರೆ
ಅದೇವು ನಾವದರ ಅಡಿಯಾಳು
ಮಾನಸಿಕ ದೈಹಿಕ ಆರೋಗ್ಯಕೆ ಕುತ್ತಾದೀತು

ಸೋಷಿಯಲ್ ಮೀಡಿಯಾದ
ವ್ಯಾಪಕ ಬಳಕೆ   ಅದೀತೊಂದು ಚಟ
ಜೀವನವಾದೀತು ಯಾಂತ್ರೀಕೃತ
ಕಾಲ್ಪನಿಕ ವಿಹಾರವ ಮಾಡುತ್ತ
ವಾಸ್ತವ ಜೀವನ ಮರೆಸುವುದು

ಮಕ್ಕಳ ಓದನು ಕೆಡಿಸಿ
ಬೊಜ್ಜಿನ ದೇಹವ ಬೆಳೆಸುವುದು
ವ್ಯಕ್ತಿ ವ್ಯಕ್ತಿಗಳ ಸಂಬಂಧವು ಹಳಸಿ
ಸಂವಹನ ಶಕ್ತಿಯು ಕುಂದುವುದು

ನೆರೆಮನೆಯವರ ಜತೆ ತನ್ನನು ಹೋಲಿಸಿ
ಕರುಬುವಮನ ಪ್ರಪಂಚದ
ಜನರಜತೆ ಹೋಲಿಸಿಕರುಬುತಿದೆ

ಇತರರ ಜತೆ ಹೋಲಿಸುತ
ಅವರಂತಾಗುವ ಧಾವಂತದಲ್ಲಿ
ಜೀವನವೆಲ್ಲ ನಾಟಕವಾಗಿ
ತನ್ನ ತನವನು ಮರೆಯುತಿದೆ

ಅತಿಯಾದ ಬಳಕೆಯ ಮಾಡುವ
ಬದಲು ನಿಯಂತ್ರಣದಲ್ಲಿ ಇರುತ
ಸರಿಯಾದ ರೀತಿಯಲಿ ಬಳಸುತ
ಪಡೆಯೋಣ ನಾವು ಇದರ ಉಪಯೋಗ

ಪಂಕಜಾ.ಕೆ.

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...