Skip to main content

ಮಗು..ನಗು

ಮಗು...ನಗು

ಅರಳಿದೆ ತನುವು ನಿನ್ನೊಲವ ಸವಿದು
ಸಂತಸದ ಹೊನಲು ಹರಿಯುತ್ತಿದೆಇಂದು

ಒಲವಿನಾ ಬಳ್ಳಿಯು ಚಿಗುರುತಿದೆ
ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ

ಮನದಲಿ  ಮುದ ತುಂಬಿದೆ ಇನಿಯ
ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ

ಕಂದಮ್ಮ ಮನೆ ತುಂಬಾ ನಲಿದಾಡಿ
ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ

ಮುದ್ದು ಮಗುವಿನ ಆಟ ಪಾಠ
ತುಂಬಿದೆ ಮನೆಯಲಿ ಸಂತಸದ ಕೂಟ

ಆತನ ಬಾಲ ಲೀಲೆಗಳೇನು ಚೆನ್ನ
ನಂದಗೋಕುಲ ಮಗುವಿರುವ ಮನೆ ಚಿನ್ನ

ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ
ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ

ಸಾರ್ಥಕವಾಯಿತು ನನ್ನೀ ಬಾಳು
ಇನ್ನಿಲ್ಲ ಮನದಲ್ಲಿ  ಎಂದು ಗೋಳು

ಮನೆತುಂಬ ತುಂಬಿದೆ  ಅಳು ನಗು
ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು

ನಗುತಿರು ಎಂದೆಂದೂ. ನನ್ನ  ಕಂದ
ಬಾಳಲ್ಲಿ ತುಂಬಿರಲಿ ನಿತ್ಯ ಆನಂದ

ಪಂಕಜಾ ಕೆ.

Comments