ಭಾಸ್ಕರ
ಬಿಸಿಲಿನ ತಾಪ ದಿನ ದಿನಕೂ ಏರುತಿದೆ
ಮುದ್ದಿಸಲು ಬರುತಿಹನು ಭಾಸ್ಕರ
ಸೆಖೆಯಉರಿ ತಾಳಲಾರದಾಗಿದೆ
ಮುರುಟಿ ಹೋದಳು ಸಸ್ಯ ರಾಶಿ
ಬಾನಲಿ ತುಂಬಿದ ಕಪ್ಪು ಮೋಡದ ಸಾಲು
ಹೊರಟು ಹೋಗುತ್ತಿದೆ ಮಳೆಯಸುರಿಸದೆ
ನಿಟ್ಟುಸಿರು ಬಿಡುತಿಹನು ರೈತ
ಕೃಷಿಯನಂಬಿ ಬದುಕುತಿರುವನವ ಕೆಟ್ಟ
ಪಂಖದ ಗಾಳಿಯೂ ಬಿಸಿಯೇರುತಿದೆ
ಭೂತಾಯಿ ಒಡಲಲ್ಲಿ ನೀರ ಸೆಳೆ ಅಳಿಯುತಿದೆ
ಪಶು ಪಕ್ಷಿಗಳು ನೀರಿಲ್ಲದೆ ಜೀವ ಕಳೆದುಕೊಳ್ಳುತ್ತಿವೆ
ಬಾಂದಳವ ನಿಟ್ಟಿಸುತ ನಿಡುಸುಯ್ಯುವುದೇ ಆಯಿತಲ್ಲ
ದೇವಾ ನಿನಗೆ ಇನಿತೂ ಇಲ್ಲವೇ ಕರುಣೆ
ನಿನ್ನ ಈ ಮಕ್ಕಳ ಮೇಲೆ ನಿನಗೇಕೆ ಬಾರದು ಕರುಣೆ
ಸುಡಬೇಡ ತನು ಮನವ ಭಾಸ್ಕರ
ದಾರಿಬಿಡು ವರುಣನಿಗೆ ಓ ರವಿತೇಜ
ಬೇಡುವೆನು ನಿನ್ನ ಬಿಡು ನಿನ್ನ ಉರಿಮುಖವ
ಬರಲಿ ಒಮ್ಮೆ ಮಳೆ ತಂಪಾಗಲಿ ಇಳೆ
ಪಂಕಜಾ.ಕೆ.
Comments
Post a Comment