ಗಜಲ್ 11
ಒಲವ ತೇರನು ಏರಿ ಬಂದವಳು ನೀನಲ್ಲವೇ
ಬಾಳಪಯಣದಲಿ ಜತೆಯಾಗಿ ನಿಂದವಳು ನೀನಲ್ಲವೇ
ನೀನಿರಲು ನನ್ನ ಮನದಲ್ಲಿ ತುಂಬಿದೆ ಅಮಲು
ಬಿಸಿಯೇರುವ ಮೈಯನು ತಣಿಸುವವಳು ನೀನಲ್ಲವೇ
ಒಲವ ಧಾರೆಯ ಹರಿಸಿ ಹುಸಿಮುನಿಸು ತೋರಿ
ತಂಗಾಳಿಯ ಕಂಪನು ಮನಕೆ ತುಂಬಿದವಳು ನೀನಲ್ಲವೇ
ನಗು ನಗುತ ಪ್ರೀತಿ ಸೋನೆಯ ಹರಿಸುತ ಬಂದು
ನನ್ನೆದೆಯ ಬಾಂದಳದಿ ಬಂದು ಕುಳಿತವಳು ನೀನಲ್ಲವೇ
ನಮ್ಮೊಲವಿಗೆಲ್ಲಿರುವುದು ಎಲ್ಲೆ ಹೇಳು
ತಾವರೆಯಚೆಲುವಿನಂದದಿಬಾಳಿಗೆಬಣ್ಣಬಳಿದವಳುನೀನಲ್ಲವೇ
ಪಂಕಜಾ.ಕೆ.ಮುಡಿಪು
Comments
Post a Comment