ಹಳ್ಳಿಯ ನೋಟ
ಸುತ್ತಲೂ ತುಂಬಿದಹಸಿರಿನ ಬೆಟ್ಟ
ಕಂಗುತೆಂಗುಗಳ ತೊನೆಯುವ ಮಾಟ
ಜುಳುಜುಳುಹರಿಯುವನೀರಿನ ತೊರೆ
ಬಾಗುತ ಕುಣಿಯುವಭತ್ತದ ತೆನೆ
ಹಾಡುವ ಹಕ್ಕಿಗಳಚಿಲಿಪಿಲಿ ಗಾನ
ಮಂಜುಳ ನಾದದಿತೇಲುವ ಮನ
ದೂರದಿ ತೋರುವ ಮಂಜಿನ ಬೆಟ್ಟ
ಸರಿಸುತ ಬರುತಿಹ ರವಿಕಿರಣದ ನೋಟ
ಕರಗುವ ಮಂಜಿನ ಹನಿ
ಗಿಡ ಮರಗಳಲ್ಲಿ ಕುಳಿತಿಹ ಹನಿ
ಅರಳುವ ಹೂಗಳ ನರುಗಂಪು
ಬೀಸುವಗಾಳಿಯು ತರುತಿದೆ ಕಂಪು
ಹಾಡುವಕೋಗಿಲೆ ಗಾನದ ಇಂಪು
ಹಾರಾಡುವ ಬಣ್ಣ ಬಣ್ಣದ ಚಿಟ್ಟೆಗಳಗುಂಪು
ಹೂವಿಂದಹೂವಿಗೆಹಾರುವ ಚಿಟ್ಟೆಗಳ ದಂಡು
ಮಕರಂದ ಹೀರುತ ನಲಿಯುವುದ ಕಂಡು
ಕಣ್ಮನ ತುಂಬಿತುಹಳ್ಳಿಯ ನೋಟ
ಪ್ರಕೃತಿಯ ಉಸಿರಿನ ಚೆಲುವಿನ ತೋಟ
ಪಂಕಜಾ.ಕೆ. ಮುಡಿಪು
Comments
Post a Comment