ನೀರಿನ ಒಂದೊಂದು ಬಿಂದು ಅಮೂಲ್ಯ ನಿಧಿ
ಕಳೆದು ಕೊಂಡಾಗ ತಿಳಿಯುವುದು ಅದರ ಬೆಲೆ
ಬೇಸಿಗೆಯ ಬಿರು ಬಿಸಿಲಿಗೆ ಬಳಲಿ ಬೆಂಡಾದಾಗ
ತಿಳಿಯುತ್ತಿದೆ ನೋಡಿ ನಮಗೆ ನೀರ ಮಹತ್ವ
ಮಳೆಯು ಸುರಿಯುವಾಗ ಉಳಿಸಬೇಕು ನೀರಿನ
ಅರಿಯಬೇಕು ಜಲಮರುಪೂರಣದ ಮಹತ್ವ
ನೀರಿಂಗಿಸಲುಹರಿಯುವ ನೀರಿಗೆ ಒಡ್ಡುಗಳ ಕಟ್ಟಿ
ಮನೆಯ ಮಾಡಿನ ನೀರನ್ನು ಬಾವಿ ಕೆರೆ ಗಳಲಿ ಇಂಗಿಸಿ
[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು ಕಾಗೆಯ ಕಂಡರೆ ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ ದಕ್ಷ ಕೆಲಸಗಾತಿ ಸ್ವಯಂ ನಿವೃತ್ತಿಯ ನಂತರ ಸಂಪೂರ್ಣ ಮನೆಯೊಡತಿ ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ ಹೊಲಿಗೆ ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ ಮುಡಿಪು ಮೆಚ್ಚಿನ ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...
Comments
Post a Comment