Skip to main content

ದೀಪಾವಳಿ

ದೀಪಾವಳಿ

ಬೆಳಕಿನ ಹಬ್ಬವುದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ  ಹಾವಳಿ

ಪರಿಸರವೆಲ್ಲ ಮಲಿನ
ಜೀವ ಜಂತುಗಳ ಹರಣ

ಹಚ್ಚಬೇಕು ಸಾಲು ಸಾಲು ದೀಪ
ಬಿಡಬೇಕು ಪಟಾಕಿಗಳ  ತಾಪ

ಸಾಲು ಸಾಲು ಹಣತೆಯ ಹಚ್ಚಿ
ಮನೆ ಮನದ ಕಳೆಯ  ಕೊಚ್ಚಿ

ಬೆಳಗಬೇಕು ಪ್ರೀತಿ ವಿಶ್ವಾಸದ ಹಣತೆ
ಎಲ್ಲರೊಡನೆನಲಿದುಕಳೆಯಬೇಕುಜಡತೆ

ಹಬ್ಬದ ಸಂಭ್ರಮಕ್ಕೆ ಸಿಹಿ
ಸವಿಯಬೇಕು ಉಲ್ಲಾಸದ ಸವಿ

ಜೀವನದ ಏಕತಾನತೆ ಕಳೆದು
ಜೀವನೋಲ್ಲಾಸವ ತಳೆದು

ನಲಿಯಬೇಕುಎಲ್ಲರೊಡನೊಂದಾಗಿ
ದೀಪಜ್ಯೋತಿಯಮನಮನೆಗಳಲ್ಲಿ ಬೆಳಗಿ

ಪಂಕಜಾ.ಕೆ.

Comments