Skip to main content

ನಿಶೆ

ನಿಶೆ

ನಿಶೆ ಯೊಡನಾಡಲು
ರವಿ ತೆರಳುವ ಹೊತ್ತು
ನಭದ ತುಂಬಾ ತುಂಬಿತು
ಬೆಳ್ಳಿ ಚುಕ್ಕಿಗಳ ರಂಗೋಲಿ

ಇರುಳ ಚೆಲುವನು
ಸಾರಲು ಬಂದವುl
ಅಂಬರದ  ತುಂಬೆಲ್ಲ
ಮುತ್ತಿನ ಮಣಿಗಳ ಸಾಲುll

ಅಗಸದಿ ತಾರೆಗಳು
ಕಣ್ಣುಮಿಟಿಕಿಸುತಿರಲು l
ನಭದ ತುಂಬಾ ಹರಡಿತು
ಚಂದ್ರಮನ ಬೆಳಕುll

ತಂಪು ಗಾಳಿಯು  ಬೀಸುತ
ಮನವ ಕೆಣಕಲು l
ಮೈ ಮನದ ತುಂಬೆಲ್ಲ
ಆನಂದದ ಕಡಲು ll

ರಾತ್ರಿಯನು ಹಗಲಾಗಿಸುವ
ಪೂರ್ಣ ಚಂದಿರನ ಬಿಂಬ l
ಮನವ  ಕೆಣಕುವ ನಿನ್ನ
ಕುಡಿನೋಟದ  ಕಾವು ll

ಹಗಲಿನೊಡನಾಟದಿ
ಬಳಲಿದೆ  ಮೈಗೆ l
ತಂದಿತು ಮುದವನು
ರಾತ್ರಿಯ ತಂಪು ll

ಪಂಕಜಾ.ಕೆ.

Comments