Skip to main content

ಮಾತೆ

ಮಾತೆ
ಕಾಯುತಿದೆ ಜೀವವೊಂದು
ಪ್ರೀತಿ ಸುರಿಸುವ ಕರಗಳಿಗಾಗಿ

ನವಮಾಸಗಳು ಗರ್ಭದಲಿ ಹೊತ್ತು
ಕಂದನ ಬೆಳವಣಿಗೆಯಲಿ ನಲಿದ ಹೊತ್ತು

ಪ್ರತಿ ನಿತ್ಯ ದಿನಗಳನೆಣಿಸುತ ಕಾದು
ಹೆತ್ತಳಾಕೆ  ನೂರು ಕಷ್ಟಗಳಲಿ ಬೆಂದು

ಮಗುವಿನ ಬಾಲಲೀಲೆಯಲಿ
ಮರೆತಳಾಕೆ ಕಷ್ಟ ನಷ್ಟಗಳ ಬೇಲಿ

ಕಂದನ  ನಗುವಿನಲಿ ತಾ ನಕ್ಕು
ಆತನ ಅಳುವಿನಲಿ ತಾ ಅತ್ತು

ಕಷ್ಟಗಳ ಸೋಕಿಸದೆಯೆ
ಬೆಳೆಸಿದಾ ತ್ಯಾಗಮಯಿ

ಪಡೆದ ಪದವಿಯ ನಂಟು
ಬೇಡವಾಯಿತವಗೆ ಮಮತೆಯ ಗಂಟು

ಕಡಿದೊಗೆದ ತಾಯ ಮಮತೆಯನು
ಅನಾಥಾಶ್ರಮಕೆ ದೂಡಿದನವಳನು

ಕಣ್ಣೀರ ಕಡಲಲ್ಲಿ  ಹೆತ್ತು ಹೊತ್ತು ಸಾಕಿದ ಮಾತೆ
ಕಂದನ ನೆನೆಯುತ ಹರಸುವ ಸಂಜಾತೆ

ಕರುಣೆಯಿಲ್ಲದ ಆತನೊಬ್ಬ ಕಟುಕ
ಹೆತ್ತಮ್ಮನ ಕರುಳ ಉರಿಸಿದ ಘಾತುಕ

ಸಾಕಿ ಸಲಹಿದ ಮಾತೆಯ ಮಮತೆ
ಮರೆಯುವರೇಕೋ  ಜನತೆ

ಬರದಿರದೆ  ಅವರಿಗೂ ಅದೇ  ಗತಿ
ಇರಲಾರದೇ ಅವರಿಗೆ ಆ ಭೀತಿ

ಕಡೆಗಣಿಸದಿರಿ ವೃದ್ಧಾಪ್ಯದಲಿ ಹೆತ್ತವರ
ಬಾಳು  ಗೋಳಾದೀತು  ಎಚ್ಚರ

ಪಂಕಜಾ.ಕೆ.

Comments