Skip to main content

ಒಲವ ತೇರು ಭಾವಗೀತೆ

ಭಾವಗೀತೆ

ಒಲವ ತೇರು

ಬಾಂದಳದಿ ಮಿನುಗುವ ಬೆಳ್ಳಿ ಚುಕ್ಕೆ ಗಳು
ನಿನ್ನ ಕಣ್ಣೋಟದಂತೆ ಸೆಳೆಯುತಿದೆ

ಕಗ್ಗತ್ತಲೆಯಲಿ   ಮಿಂಚೊಂದು ಸುಳಿದಂತೆ
ನನ್ನ ಬರಡು ಬಾಳಿಗೆ ನೀ ಜತೆಯಾದೆ
ನಿನ್ನೆದೆಯ ಬಾಂದಳದಿ ಮಿನುಗುವ ತಾರೆ ನಾನಾದೆ
ನಿನ್ನ ಪ್ರೀತಿಯ ಜಲ ಸೋಕಿ ನಾ ನವಿಲಾದೆ

ನಮ್ಮಿಬ್ಬರ ಈ ಒಲವ ಬಾಳ ತೇರಿನಲಿ
ಮುನಿಸೆನ್ನುವ ಕರಿ ನೆರಳು ಸೋಕದಿರಲಿ
ಕಷ್ಟ ಸುಖಗಳಲಿ ಜತೆಯಾಗಿ
ಅನುದಿನವೂ  ಜೋಡಿ ಹಕ್ಕಿಗಳಂತೆ ಬಾಳೋಣ 

ಪಂಕಜಾ.ಕೆ.

Comments