ಕಾವ್ಯಾಂತರಂಗ ಸ್ಪರ್ಧೆಗಾಗಿ
ವಿಷಯ ....ಬರಗಾಲದ ಲ್ಲಿ ರೈತನ ಗೋಳು
ಅನ್ನದಾತನ ಬವಣೆ
ಭೂಮಿ ಬಿರಿದಿದೆ
ಒಡಲು ನೊಂದಿದೆ
ಜೀವನ ಬಾರವೆನಿಸಿದೆ
ಕಣ್ಣು ತುಂಬಿದೆ
ಮನಸು ಅಳುತಿದೆ
ದೇವ ಕರುಣೆಯು ಬಾರದೆ
ಬಾನ ಬಯಲಲಿ
ಮುಗಿಲು ತುಂಬಿದೆ
ಮಳೆಯ ಸುರಿಸದೆ ಸರಿದಿದೆ
ಬೆಳೆದ ಬೆಳೆಗಳು
ನೀರ ಕೊರತೆಗೆ
ಬಾಡಿ ಉದುರಿ ಹೋಗಿದೆ
ಪಟ್ಟ ಕಷ್ಟಕೆ
ಫಲವು ಇಲ್ಲದೆ
ಬಾಳ ದೋಣಿಯು ಮುಳುಗಿದೆ
ಹರಿದ ಬಟ್ಟೆಯು
ಹಸಿದ ಹೊಟ್ಟೆಯು
ಬರಗಾಲದ ಬವಣೆಯ ತಿಳಿಸಿದೆ
ಕಾಲ ಕಾಲಕೆ
ಮಳೆಯು ಸುರಿಯುತ
ಬದುಕ ಬವಣೆಯು ನೀಗಲಿ
ಅನ್ನ ಬೆಳೆಯುವ
ರೈತನರಮನೆಯಲಿ
ಹೊನ್ನ ಕಣಜವು ತುಂಬಲಿ
ಪಂಕಜಾ.ಕೆ ಮುಡಿಪು
Comments
Post a Comment