ಪ್ರೀತಿ ಯ ಕಾವ್ಯ( ಚಿತ್ರ ಕವನ)
ಕೊಳಲು ಹಿಡಿದ ನಿನ್ನ ಕೈಯು
ನನ್ನ ಕೈಯ ಬೆಸೆದಿದೆ
ಮನದ ತುಂಬಾ ಪ್ರೇಮದಲೆಯ
ಬಾವವನ್ನು ತಂದಿದೆ
ಕಣ್ಣು ತುಂಬಾ ನಿನ್ನ ರೂಪ
ತುಂಬಿ ನಿಂತು ಕಾಡಿದೆ
ನಿನ್ನ ಕಣ್ಣ ಸೆಳೆತದಲ್ಲಿ ನನ್ನ
ಮನವು ಸಿಕ್ಕಿ ನರಳಿದೆ
ಕಳ್ಳ ಕೃಷ್ಣ ಹೇಗೆ ಬಂದು
ಮನಕೆ ಲಗ್ಗೆ ಇಟ್ಟೆಯೊ
ಪ್ರೀತಿ ಎನ್ನುವ ಕಾವ್ಯವನ್ನು
ಎಂದು ನೀನು ಬರೆದೆಯೋ
ಒಲಿದ ಜೀವ ಜತೆಗೆ ಇರಲು
ಬಾಳು ಎಷ್ಟು ಸುಂದರ
ಪ್ರೀತಿಯಿಂದ ಕೈ ಯ ಹಿಡಿದು
ನಡೆವುದೆಷ್ಟು ಬಂಧುರ
ನಮ್ಮ ಪ್ರೀತಿ ಜಗವ ಗೆದ್ದು
ಮೋಡಿಯನ್ನು ಮಾಡಿದೆ
ಪ್ರೀತಿಗಿಲ್ಲ ಎಂದೂ ಸಾವು
ಎನುತ ಸಾರಿ ಹೇಳಿದೆ
ಪಂಕಜಾ. ಕೆ
Comments
Post a Comment