Skip to main content

ಮಕ್ಕಳ ನೀತಿ ಕಥೆ ಸೋಮಾರಿ ಶಿವ

ಮಕ್ಕಳ ನೀತಿ ಕಥೆ

ಸೋಮಾರಿ ಶಿವ

ಒಂದು ಊರಿನಲ್ಲಿ  ಶಿವ ಎಂಬ ತರುಣನಿದ್ದ ಸ್ಪುರದ್ರೂಪಿಯೂ, ಗಟ್ಟಿಮುಟ್ಟಾಗಿಯೂ ,ಇದ್ದ ಆತನು ತುಂಬಾ ಸೋಮಾರಿಯಾಗಿದ್ದನು. ಮತ್ತು ಯಾವಾಗಲೂ ತಾನು ಬಡವ ತನ್ನದು ಕೆಟ್ಟ ಅದೃಷ್ಟವೆಂದು ಬೇಸರಿಸುತ್ತಿದ್ದನು.  ಊರಿನ ಎಲ್ಲರೂ ಆತನನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದರು. 
       ಒಂದು ದಿನ ಆತ ಬೇಸರದಿಂದ ಊರಿನ ಹೊರಗೆ ತಿರುಗಾಡುತ್ತಿರುವಾಗ  ಅವನಿಗೆ ಒಬ್ಬ ಶ್ರೀಮಂತ ವರ್ತಕ ಭೇಟಿಯಾಗುತ್ತಾನೆ. ಆತ ಶಿವನನ್ನು ನೋಡಿ ನೀನು ಬಹಳ ದುಃಖಿತನಂತೆ ಕಾಣುತ್ತಿದ್ದಿಯೇ ಯಾಕೆ ಎಂದು ವಿಚಾರಿಸುತ್ತಾನೆ. ಶಿವನು ತನ್ನ ಬಡತನದ ಬಗ್ಗೆ ಹೇಳಿ ಬೇಸರಿಸುತ್ತಾನೆ. ಅವನ ಮಾತುಗಳನ್ನು ಕೇಳಿದ ವರ್ತಕ ಇಷ್ಟು ಗಟ್ಟಿಮುಟ್ಟು ದೇಹ ಇದ್ದರೂ ಸೋಮಾರಿಯಾಗಿ ಇರುವ ಇವನಿಗೆ ಬುದ್ದಿ ಕಲಿಸಬೇಕೆಂದು  ನಿರ್ಧರಿಸಿ ಅವನನ್ನು ತನ್ನ ಜತೆ ಕರೆದೊಯ್ಯುತ್ತಾನೆ .ಮನೆಗೆ ಹೋದ ಮೇಲೆ ವರ್ತಕ ನಿನಗೆ ಬೇಕೆನಿಸಿದಷ್ಟು  ದುಡ್ಡು ತೆಗೆದುಕೊ , ಆದರೆ ಅದಕ್ಕೆ ಪ್ರತಿಯಾಗಿ ನಿನ್ನ ಒಂದು ಕೈಯನ್ನು ನನಗೆ ಕತ್ತರಿಸಿ ಕೊಡಬೇಕು, ಎಂದು ಹೇಳಿದನು .ವರ್ತಕ ಹೇಳಿದ ಮಾತು ಕೇಳಿ ಶಿವನಿಗೆ ಗಾಬರಿಯಾಯಿತು.  ಶಿವನು ಎಷ್ಟು ದುಡ್ಡು  ಕೊಟ್ಟರೂ ನನ್ನ ಕೈಯನ್ನು ಕೊಡಲಾರೆ ಎಂದನು. ಆಗ ವರ್ತಕನು ನಿನ್ನ ಒಂದು  ಕಾಲನ್ನಾದರೂ ಕೊಡು ನಿನಗೆ ಬೇಕಾದಷ್ಟು ಹಣ ಕೊಡುವೆ ಎಂದನು.ಆಗ ಶಿವನು ಕೋಪದಿಂದ ನೀನು ಎಷ್ಟೇ ದುಡ್ಡು ಕೊಟ್ಟರೂ ನನ್ನ ಕೈ ಕಾಲುಗಳನ್ನು ಕೊಡಲಾರೆ ಎಂದನು. ವರ್ತಕ ನಗುತ್ತಾ  ನೀನು ಬಡವನಲ್ಲ, ನಿನ್ನ ಬಳಿ ದೇವರು ಕೊಟ್ಟ ಅಮೂಲ್ಯ ಆಸ್ತಿ ಇದೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ . ದೇವರು ನಿನಗೆ ಕೊಟ್ಟ ಅಮೂಲ್ಯ ಅಸ್ತಿಯಲ್ಲಿ ಯಾವದೂ ಊನವಾಗಿಲ್ಲ  ಹಾಗಿದ್ದರೂ ನೀನು  ಈ ರೀತಿ   ನಿರುತ್ಸ್ಸಾಹದಿಂದ  ಇರುವುದು ಸರಿಯೇ ಎಂದು ಕೇಳುತ್ತಾನೆ.  ಸೋಮಾರಿತನ ಬಿಟ್ಟು ದೇವರು ಕೊಟ್ಟ ಆಸ್ತಿಯನ್ನು ಉಪಯೋಗಿಸಿ ಸಂಪಾದನೆ ಮಾಡು ಎಂದು ಬುದ್ದಿ ಹೇಳುತ್ತಾನೆ ವರ್ತಕನ ಮಾತಿನಿಂದ ಶಿವನಿಗೆ ಜ್ಞಾನೋದಯವಾಗುತ್ತದೆ . ಆತ  ತನ್ನ ಸೋಮಾರಿತನ ಬಿಟ್ಟು ಚೆನ್ನಾಗಿ ದುಡಿದು ಶ್ರೀಮಂತನಾಗುತ್ತಾನೆ.ಕಾಲಕ್ರಮೇಣ ಆತನು ಒಬ್ಬ ಗಣ್ಯ ವ್ಯಕ್ತಿಯಾಗುತ್ತಾನೆ.

ನೀತಿ..ಸೋಮಾರಿತನ ದೊಡ್ಡ ರೋಗ ಸೋಮಾರಿಯಾದವಣಿಗೆ ಎಲ್ಲಿಯೂ ಬೆಲೆಯಿಲ್ಲ

ಪಂಕಜಾ. ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

*ಆರೋಗ್ಯದ ಗುಟ್ಟು*ಒಂದು ಹನಿ ಪೋಲಿಯೋ ಬಿಂದು ಮಕ್ಕಳ ಪಾಲಿನ ಅಮೃತದ ಸಿಂಧು ಹಾಕಿರಿ ಮಕ್ಕಳಿಗೆ ಪೋಲಿಯೋ ಲಸಿಕೆಬಾರದಂತೆ ಅಂಗವಿಕಲತೆಯ ಕುಣಿಕೆಆರೋಗ್ಯವಂತರಾಗಿರಲು ನಾವುತಿನ್ನಬೇಕು ಆಹಾರದ ಜತೆ ಬೇವುಕಾಲಕ್ಕೆ ಸರಿಯಾಗಿ ಊಟ ತಿಂಡಿ ಮಾಡಿಸಾಕಷ್ಟು ನೀರು ಕುಡಿಯುವುದು ನೋಡಿಸಮತೋಲನ ಆಹಾರ ಸೇವಿಸಬೇಕುಕಾಲಕಾಲಕ್ಕೆ ಊಟ ತಿಂಡಿ ಮಾಡಬೇಕುಹಣ್ಣು ಹಂಪಲುಗಳು ನಿಮ್ಮ ಆಹಾರದಲ್ಲಿರಲಿಆರೋಗ್ಯಕ್ಕಾಗಿ ಯೋಗ ನಡಿಗೆಯ ಅಭ್ಯಾಸವಿರಲಿಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ ಕುರುಕಲು ತಿಂಡಿಗಳ ಸೇವನೆಯನ್ನು ನಿವಾರಿಸಿಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ನಿತ್ಯವೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿಕನಿಷ್ಠ ಆರು ಗಂಟೆಗಳ ನಿದ್ದೆ ಅವಶ್ಯಕದೇಹ ಮನಸಿಗೆ ಆರಾಮದಾಯಕಹಸಿವೆ ಆದಾಗ ಮಾತ್ರ ಆಹಾರ ಸೇವಿಸಿಮಾದಕ ವಸ್ತುಗಳ ಸೇವನೆ ನಿಲ್ಲಿಸಿ*ಪಂಕಜಾ.ಕೆ.ರಾಮ ಭಟ್**ಮುಡಿಪು.ಕುರ್ನಾಡು*