Skip to main content

ಕಾವ್ಯಾಕೂಟ ದಲ್ಲಿ ಪ್ರಥಮಜಡೆ ಕವನ

ಜಡೆ ಕವನ
ಆಗಸದಷ್ಟು ಕನಸು

ಆಗಸದಲಿ ತುಂಬಿದೆ  ಬೆಳ್ಳಿ ಮೋಡ
ಮೋಡದ ಎಡೆಯಲ್ಲಿ ಮಿನುಗುವನು ರವಿ
ರವಿ ಮೂಡಿದಾಗ ಬಾನಲ್ಲಿ ಬಣ್ಣಗಳ ತೋರಣ
ತೋರಣವ ಕಟ್ಟಿ ನಲಿಯುತ್ತಿದೆ ಮನ

ಮನದಲಿ ತುಂಬಿದೆ ಭರವಸೆಯ ಹೊಂಗಿರಣ
ಹೊಂಗಿರಣದಲಿ ಬೆಳ್ಳಿ ಮೋಡದ ಅಲೆ
ಅಲೆಗಳು ಅಪ್ಪಳಿಸಿ ಕನಸುಗಳು ನುಚ್ಚುನೂರು
ನುಚ್ಚುನೂರಾದ ಕನಸುಗಳ ಕಂಡು ಕಣ್ಣೀರು

ಕಣ್ಣೀರ ಧಾರೆ ಹರಿದು ಮನಸು ಗಟ್ಟಿ
ಗಟ್ಟಿಯಾದ ಮನದಲ್ಲಿ ಆಸೆಯ  ಕಿಡಿ
ಕಿಡಿಗೆ ತಗಲಿದ ಬೆಂಕಿಯಲಿ ಅರಳಿತು ಹೂವು
ಹೂವಿನ ಮಧು ಹೀರಲು ಬಂದಿವೆ ದುಂಬಿಗಳು

ದುಂಬಿಗಳ ದಂಡು ಕಂಡು  ಮನಕೆ ಆಹ್ಲಾದ
ಆಹ್ಲಾದ ತುಂಬಿ ಕುಣಿಯುತ್ತಿದೆ ಮನಸು
ಮನಸಿನಾಗಸದಲಿ ತುಂಬಿತು ಕನಸು
ಕನಸು ನನಸಾಗಲು ಪಡಬೇಕು ಕಷ್ಟ

ಕಷ್ಟದ ದುಡಿಮೆಯಿಂದ ಬಾಳು ಹಸನು
ಹಸನಾದ ಮನಸಿನಲಿ ತುಂಬಿತು ಒಲವು
ಒಲವು ಮೂಡಿದಾಗ ಕಂಡಿತು ಗೆಲುವು 
ಗೆಲುವು ತಂದಿತು ಹುರುಪು ಬಾಳಿನ ಅಗಸದಲಿ
ಪಂಕಜಾ.ಕೆ ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

*ಆರೋಗ್ಯದ ಗುಟ್ಟು*ಒಂದು ಹನಿ ಪೋಲಿಯೋ ಬಿಂದು ಮಕ್ಕಳ ಪಾಲಿನ ಅಮೃತದ ಸಿಂಧು ಹಾಕಿರಿ ಮಕ್ಕಳಿಗೆ ಪೋಲಿಯೋ ಲಸಿಕೆಬಾರದಂತೆ ಅಂಗವಿಕಲತೆಯ ಕುಣಿಕೆಆರೋಗ್ಯವಂತರಾಗಿರಲು ನಾವುತಿನ್ನಬೇಕು ಆಹಾರದ ಜತೆ ಬೇವುಕಾಲಕ್ಕೆ ಸರಿಯಾಗಿ ಊಟ ತಿಂಡಿ ಮಾಡಿಸಾಕಷ್ಟು ನೀರು ಕುಡಿಯುವುದು ನೋಡಿಸಮತೋಲನ ಆಹಾರ ಸೇವಿಸಬೇಕುಕಾಲಕಾಲಕ್ಕೆ ಊಟ ತಿಂಡಿ ಮಾಡಬೇಕುಹಣ್ಣು ಹಂಪಲುಗಳು ನಿಮ್ಮ ಆಹಾರದಲ್ಲಿರಲಿಆರೋಗ್ಯಕ್ಕಾಗಿ ಯೋಗ ನಡಿಗೆಯ ಅಭ್ಯಾಸವಿರಲಿಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ ಕುರುಕಲು ತಿಂಡಿಗಳ ಸೇವನೆಯನ್ನು ನಿವಾರಿಸಿಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ನಿತ್ಯವೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿಕನಿಷ್ಠ ಆರು ಗಂಟೆಗಳ ನಿದ್ದೆ ಅವಶ್ಯಕದೇಹ ಮನಸಿಗೆ ಆರಾಮದಾಯಕಹಸಿವೆ ಆದಾಗ ಮಾತ್ರ ಆಹಾರ ಸೇವಿಸಿಮಾದಕ ವಸ್ತುಗಳ ಸೇವನೆ ನಿಲ್ಲಿಸಿ*ಪಂಕಜಾ.ಕೆ.ರಾಮ ಭಟ್**ಮುಡಿಪು.ಕುರ್ನಾಡು*