Skip to main content

ನಾನು ನೀನು ಕಲಾದೇಗುಲ ಮೆಚ್ಚುಗೆ

ನಾನು ನೀನು

ಬಾನಲ್ಲಿ   ಹರಿಡಾಡೋ ಮುಗಿಲಂತೆ ನೀನು
ಮಳೆಗಾಗಿ ಹಂಬಲಿಸುವ ಭುವಿಯಂತೆ ನಾನು
 ನನ್ನೊಡಲ ತುಂಬೆಲ್ಲಾ ನಿನ್ನದೇ ಬಿಂಬ
  ಕನಸಲ್ಲೂ ಮನಸಲ್ಲು ನೀನಿರುವೆ ಯಲ್ಲ
  
ಹೊಸಬಾಳ ಹಾದಿಯಲಿ ಜತೆಯಾಗಿ ಸಾಗಿ
ಒಲವರಸ ಹೀರೋಣ ಅನುದಿನವೂ ಬಾಗಿ
 ಜೋಡಿ ಹಕ್ಕಿಗಳ ತೆರದಿ ನಲಿಯೋಣ ನಾವು
 ಒಲವಿಂದ ಒಂದಾಗಿ  ಬಾಳೋಣ  ದಿನವೂ

ಮುಗಿಲನ್ನು ಕಂಡಾಗ  ಕುಣಿವಂತೆ ನವಿಲು
ನಿನ್ನನ್ನು ಕಂಡಾಗ ನಲಿಯುತಿದೆ ಮನವು
 ಹೂವಿನಲಿ ಗಂಧವು ಸೇರಿರುವಂತೆ
ನಾವಿಬ್ಬರೊಂದಾಗಿ ನಲಿಯೋಣವಂತೆ

 ಮನಸ್ಸಿನ ಮುಗಿಲಲ್ಲಿ ನಾನು ನೀನು
 ಹಾಯಾಗಿ ಕಳೆಯೋಣ ದಿನವೆಲ್ಲಾನಾವು
 ಅನುರಾಗದ ಅಲೆಗಳಲಿ ತೇಲುತಿದೆ ಮನಸು
 ಪ್ರೀತಿಯ  ಸೋನೆಯಲಿ ನಲಿಯುತ್ತಿದೆತನುವು
 
 ಪಂಕಜಾ.ಕೆ
 
  

Comments