[05/06, 11:38 PM] pankajarambhat: *ಆತ್ಮೀಯ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ* 🙏✍📚✍📚✍📚✍📚✍
೦೨-೦೬-೨೦೨೦ <> ಮಂಗಳವಾರದ
* ಕವನ ಸ್ಪರ್ಧೆ*
*ವಿಷಯ : *ನಿನ್ನ ನೆನಪಲ್ಲೇ ಕಳೆದಿರುವೆ ದಿನಗಳ*
*ಸ್ಪರ್ಧೆಯ ಫಲಿತಾಂಶ*
*ಅತ್ಯುತ್ತಮ*
1.ಲಲಿತಾಲಕ್ಷ್ಮೀ ನಾರಾಯಣ ಭಟ್ಟ
2.ಪ್ರಮೀಳಾ ಚುಳ್ಳಿಕ್ಕಾನ
3. ಪಂಕಜಾ .ಕೆ. ಮುಡಿಪು
4.ಹರೀಶ್ ಕಜೆ
*ಉತ್ತಮ*
1.ನಾಗರಾಜ ಸರ್ವಿ
2.ಲಕ್ಷ್ಮೀ .ವಿ. ಭಟ್
3.ಕಣಿ ಪುರೇಶ ಪ್ರಿಯ
4.ಕು.ಎಂ.ಹರಿಣಿ ಮೊಗಣ್ಣಾಚಾರ್
*ಮೆಚ್ಚುಗೆ*
1. ನಾಗಲಕ್ಷ್ಮಿ.ಈ..ಪಾವಗಡ
2.ವತ್ಸಲಾ ಶ್ರೀಶ
3.ರವೀಂದ್ರ ಜಾಗವಾನಕರ
4.ಪ್ರಶಾಂತ್ ಆರ ದೈವಜ್ಞ
*ಎಲ್ಲರೂ ತುಂಬಾ ಸುಂದರವಾದ ಕವನ ರಚಿಸಿರುವಿರಿ ಶುಭ ಹಾರೈಕೆಗಳು*💐💐💐💐💐💐💐💐💐💐💐💐
*ನವಪರ್ವ ಅಡ್ಮಿನ್ ಬಳಗ*📚✍📚✍📚✍📚✍📚✍📚✍📚✍📚✍📚✍📚✍
[05/06, 11:38 PM] pankajarambhat: ರಾಧೆಯ ವಿರಹ
ಕೊಳಲನೂದುವ ಗೋಪಬಾಲನೆ
ಮನವ ಕದ್ದಿಹ ಮೋಹನಾಂಗನೆ
ಕಾಯುತಿರುವೆನು ನಿನ್ನ ದಾರಿಯ ಚೆಲುವ ಚೆನ್ನಿಗನೆ
ವಿರಹದುರಿಯಲಿ ಬೇಯುತಿರುವೆನು
ತಾಳಲಾರೆನು ಅದರ ನೋವನು
ಮೊರೆಯ ಆಲಿಸಿ ಬಾರೋ ಬೇಗನೆ ಹೇ ಮಾಧವನೇ
ಎಲ್ಲಿ ನೋಡಲಿ ನೀನೇ ಕಾಣುವೆ
ಕಳೆದ ದಿನಗಳ ನೆನಪು ಭಾಧಿಸಿ
ನೋಯುತಿರುವೆನು ನೋಡು ಕೇಶವನೇ
ನಿನ್ನ ನೆನಪಲ್ಲೇ ಕಳೆದಿರುವೆ ದಿನಗಳನು
ಕಾಯಲಾರೆನು ಇನ್ನು ನಾನು
ಎಂದು ಬರುವೆಯೋ ಹೇಳು ಮುರಾರಿಯೇ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment