[13/04, 7:11 AM] ಶ್ಯಾಮಸುಂದರ ಅಪ್ಪಾಜಿ ಕವಿ: ವಚನ
ಪಟ್ಟರಿಯದ ಜಟ್ಟಿ | ಗಿಟ್ಟು ಕಾಣದ ಶೆಟ್ಟಿ |
ತೊಟ್ಟು ಜೇನಿಲ್ಲದಾ ಹುಟ್ಟಿ | ಜಗದಲಿ |
ಅಟ್ಟೆಗೂ ಹೀನ ತಿಳಿ ಶಾಮ ||
ಶ್ಯಾಮ ✍
ಗಿಟ್ಟು= ಲಾಭ
ಹುಟ್ಟಿ = ಜೇನು ಗೂಡು
ಅಟ್ಟೆ = ಕಬ್ಬಿನ ಸಿಪ್ಪೆ
[13/04, 8:17 AM] +91 72592 12415: ನಾನು ತಿಳಿದಂತೆ
ತ್ರಿಪದಿಗಳಲ್ಲಿ ಹೀಗೆ ಬರುತ್ತೆ ಅಂತ
ಒಂದನೇ ಸಾಲಿನಲ್ಲಿ ೨ ನೇ ಮತ್ತು ೪ ನೇ ಗಣದ ನಂತರ ಗೆರೆ
ಎರಡನೇ ಸಾಲಿನಲ್ಲಿ ೩ ನೇ ಗಣದ ನಂತರ ಗೆರೆ
ಮೂರನೇ ಸಾಲಿನಲ್ಲಿ ಕೊನೆಗೆ ಗೆರೆ
ನಾನು ತಿಳಿದಂತೆ ಅವು ಯತಿಯನ್ನು ಸೂಚಿಸುತ್ತವೆ
೫ ೫ | ೫ ೫
೫ ೩ ೫ | ೫
೫ ೩ ೫ |
ಅಂಶಗಣದಲ್ಲೂ ಇದೇ ರೀತಿ ಯತಿ ಬರಬೇಕು
ವಿ ವಿ | ವಿ ವಿ |
ವಿ ಬ್ರ ವಿ | ವಿ
ವಿ ಬ್ರ ವಿ |
ಹೀಗೆ
ಇದು ನನ್ನ ಜ್ಞಾನದ ಹಂದರ ಅಷ್ಟೇ ಇದಕ್ಕೂ ಹೆಚ್ಚು ಯಾರಿಗಾದರೂ ತಿಳಿದಿದ್ದರೆ ಹಂಚಿಕೊಳ್ಳಿ
[13/04, 8:35 AM] +91 94807 88714: ಈ ಗೆರೆಯನ್ನು ಯತಿ ಎನ್ನುತ್ತಾರೆ, ಅರ್ಥಾತ್ ಉಸಿರ್ ದಾಣ. ಪದ್ಯ ಗೇಯ ಗುಣ ಹೊಂದಿದ್ದಾಗ ಉಚ್ಚಾರಣೆ ಲೋಪವಾಗದಿರಲಿ ಎಂಬ ಕಾರಣಕ್ಕೆ ಈ ಗೆರೆ ಬಳಸುತ್ತಾರೆ ಅಷ್ಟೇ.
Comments
Post a Comment