Skip to main content

ಗಜಲ್

ಗಜಲ್
ಬಾನ ಬಯಲಲಿ ಮುಗಿಲು ಹರಡಿದೆ
ಮಳೆಯ ಸುರಿಸದೆ ಬಯಲು ಬಿರಿದಿದೆ

ಬಿಸಿಲ ತಾಪಕೆಸುಟ್ಟು ಹೋದ ಬುವಿಗೆ
ಮಳೆಯ ಸಿಂಚನ ಅಮಲು ತಂದಿದೆ

ಒಣಗಿದ ಗಿಡಮರಗಳು ಚಿಗುರಿ ನಿಂತು
ಭೂದೇವಿಯ ಒಡಲು ತಣಿದಿದೆ

ಬೇಸಿಗೆಯಲ್ಲಿ ತಿಳಿಯಿತಲ್ಲಾ ನೀರ ಮಹತ್ವ
ಮಳೆಯ ನೀರನು ಇಂಗಿಸಲು  ಪ್ರಯತ್ನಿಸಬೇಕಿದೆ

ಮಳೆಕೊಯ್ಲು ನಿರಂತರವಾಗಿರಬೇಕು ಪಂಕಜಾ
ಮಳೆ ಸುರಿದು   ಇಳೆಯೊಡಲು ತಂಪಾಗಿದೆ

ಪಂಕಜಾ.ಕೆ.

Comments