ಗೇಯ ಗೀತೆ
ಹಾಲು ಜೇನು ಒಂದಾದ ಹಾಗೆ ರಾಗದಲ್ಲಿ
ಹೂವು ಗಂಧ ಬೆರೆತಂತೆ
ನಾನು ನೀನು ಒಂದಾಗಿ
ನಗು ನಗುತ ಇರುತಲಿ
ಜೀವನ ಜೋಕಾಲಿಯಾಗಿದೆ
ಬಾಳಲ್ಲಿ ತನಿರಸವು ತುಂಬಿದೆ //ಹೂವು
ಹಗಲಿರಲಿ ಇರುಳಿರಲಿ
ನಾನಿನ್ನ ಜತೆ ಇರುವೆನು
ಎಂದೆಂದೂ ಕೈಬಿಡೆನು
ನಿನ್ನಾ ಓ ಚೆಲುವೆ
ನೀ ಎಂದೆಂದೂ ನಗುತಿರು / ಹೂವು
ಈ ಸುಕೋಮಲ ಮೊಗವು
ಬಾಡದಂತೆ ಕಾಯುವೆ
ಈ ಮೌನವ ಬಿಟ್ಟು
ಮಾತಾಡು ಓ ಚೆಲುವೆ
ನಾನಿರುವೆ ನಿನ್ನೊಡನೆ ಎಂದೆಂದಿಗೂ/ಹೂವು
ಪಂಕಜಾ.ಕೆ.ಮುಡಿಪು 22 06 2020
Comments
Post a Comment