ಗೇಯ ಗೀತೆ
ಕೋಗಿಲೆ ಹಾಡಿದೆ ಕೇಳಿದೆಯಾ ರಾಗದಲ್ಲಿ
ನವಿಲದು ಕುಣಿದಿದೆ ನೋಡಿದೆಯಾ
ಮನದಲಿ ರಂಗನು ತುಂಬುತಲಿ//ನ
ಹೊಸ ಹೊಸ ಕನಸನು ಕಟ್ಟುತ ಮನವು
ಕಣ್ಣಲಿ ಕಾಂತಿಯ ತುಂಬಿ//ನ
ಬಾನಲಿ ಕಾಮನಬಿಲ್ಲು ಮೂಡಿದ ಹಾಗೆ
ಅರಳಿದ ಹೂವಿನ ಗಂಧದ ಹಾಗೆ
ಮಕರಂದವ ಹೀರುವ ಚಿಟ್ಟೆಯ ಹಾಗೆ
ಹೊಸತನ ಎದೆಯಲಿ ತುಂಬಿ//ನ
ರಾಧೆಯು ಕೃಷ್ಣನ ಅರಸುವ ಹಾಗೆ
ಕೊಳಲಿನ ಗಾನಕೆ ಒಲಿಯುವ ಹಾಗೆ
ನಿನ್ನಯ ಮೋಹಕೆ ಸೋತೆ
ನನ್ನನು ನಾನೇ ಮರೆತೆ//ನ
ಆಹಾಹಾ. ...ಆಹಾಹಾ....ಆಹಾಹಾ.
ಕಂಡಿರುವ ಕನಸು ನನಸಾದ ಹಾಗೆ
ಬಾಳಲಿ ಹೂವು ಅರಳಿದ ಹಾಗೆ
ಸಂತಸ ಮನದಲಿ ತುಂಬುವ ಹಾಗೆ
ನಿನ್ನೊಡನಾಡುತ ನಲಿಯುವ ಹಾಗೆ//ನ
ಪಂಕಜಾ.ಕೆ.ಮುಡಿಪು ..
Comments
Post a Comment