ಮುನಿದ ನಲ್ಲೆಗೆ
ಕಿಟಕಿ ಬಾಗಿಲೆಡೆಯಲಿ
ಇಣುಕುತಿರುವನು ಚಂದಿರ
ಖುಷಿಯ ಪಡುವ ಕ್ಷಣಗಳಲಿ
ಕೋಪವೇಕೆ ನನ್ನ ಇಂದಿರ
ನಮ್ಮ ಕಲಹವ ನೋಡಿ
ನಗುತಲಿರುವನು ಚಂದಿರ
ಏನು ಮಾಡಿದೆ ನೀನು ಮೋಡಿ
ನನ್ನ ಬಾಳಿನ ಇಂದಿರ
ಕೋಪ ಬಿಟ್ಟು ನಗುವ ತೋರೆ
ಬರಲಿ ನಮ್ಮ ಬಾಳಲಿ ಚಂದಿರ
ಒಲವ ಸವಿಯನು ಸವಿವ ಬಾರೆ
ನೀನೇ ನನ್ನ ಬಾಳಿನ ಚಂದಿರ
ಕೋಪತಾಪದಿ ನಲುಗದಿರಲಿ
ನಮ್ಮ ಬಾಳಿನ ತೋಟವು
ಅರಳಿ ನಗಲಿ ನಿತ್ಯ ಇರಲಿ
ಬಣ್ಣ ಬಣ್ಣದ ಹೂವ ಚೆಲುವು
ತಾರೆಗಳನುತಂದುಕೊಡವೆನೆಂದು
ಆಶೆ ಹುಟ್ಟಿಸಲಾರೆನು
ನನ್ನಒಲವನಿತ್ಯಕೊಡುವೆನೆಂದು
ಭರವಸೆ ಕೊಡುವೆನು
ಮೋಡ ತುಂಬಿದಬಾನಿ ನೆಡೆಯಲಿ
ಇಣುಕುತಿರುವ ಚಂದಿರ ತಾರೆಗಳನೊಡನಾಟವಿಲ್ಲದೆ
ಸೊರಗುತ್ತಿರುವುದು ಕಂಡಿರ
ನಲ್ಲೇ ನಿನ್ನೊಡನಾಟವಿಲ್ಲದೆ
ನಿತ್ಯ ಸೊರಗುತ್ತಿರುವೆನು
ಕೋಪ ಬಿಟ್ಟು ಒಲವ ತೋರಿ
ತುಂಬು ನನ್ನ ಬಾಳಲಿ ಬಣ್ಣವ
ಪಂಕಜಾ. ಕೆ ಮುಡಿಪು ಕುರ್ನಾಡು
Comments
Post a Comment