ನಿನ್ನೊಲುಮೆ
ಭೂತಾಯಿ ಹಸಿರು ಸೀರೆ ಮನಸೆಳೆದಿದೆ
ಭೂರಮೆಯ ಈ ಚೆಲುವು ಕಣ್ಣು ತುಂಬಿದೆ
ವರುಣನ ಒಲುಮೆಯಲಿ ಇಳೆ ನಲಿದಾಡಿದೆ
ಚಿಗುರು ಹೂ ತುಂಬಿ ಪ್ರಕೃತಿ ತೊನೆದಾಡಿದೆ
ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಅಂದ
ತಂಪಾದ ಗಾಳಿಯಲಿ ವಿಹರಿಸಲು ಆನಂದ
ಮೂಡಣದಲಿ ಮೂಡುವ ರವಿಕಿರಣದ ಸೊಬಗು
ಬಾಂದಳದ ತುಂಬೆಲ್ಲ ಹರಡಿರುವ ಬಣ್ಣದ ಮೆರುಗು
ಮೈಮನಕೆ ಮುದವನ್ನು ತುಂಬುತಿದೆ ಈ ಚೆಲುವು
ಓ ಇನಿಯಾ ನಿನ್ನೊಲುಮೆ ನನಗೆ ನೆನಪಾಗಿದೆ
ಬಾನಲ್ಲಿ ತುಂಬಿರುವ ಬಿಳಿ ಮುಗಿಲಎಡೆಯಲ್ಲಿ
ನಿನ್ನೊಲವ ಸವಿಯುತ್ತಾ ಮೈ ಮರೆಯುವಾಸೆ
ಪಂಕಜಾ.ಕೆ.ಮುಡಿಪು
Comments
Post a Comment